ಬೆಳಗಾವಿಯಲ್ಲಿ ಭಾರತ ವಿಕಾಸ ಪರಿಷತ್ತಿನ ಪ್ರಾಂತೀಯ ಕಾರ್ಯಾಗಾರ

ಬೆಳಗಾವಿಯಲ್ಲಿ ಭಾರತ ವಿಕಾಸ ಪರಿಷತ್ತಿನ ಪ್ರಾಂತೀಯ ಕಾರ್ಯಾಗಾರ  Bharat Vikas Parishad provincial workshop in Belgaum

ಬೆಳಗಾವಿ 28:  ಭಾರತ ವಿಕಾಸ ಪರಿಷತ್ತಿನ ವತಿಯಿಂದ ಕರ್ನಾಟಕ ಉತ್ತರ ಪ್ರಾಂತ ಮಟ್ಟದ ಕಾರ್ಯಾಗಾರವು ಬೆಳಗಾವಿಯ ಐಎಂಇಆರ್ ಸಭಾಂಗಣದಲ್ಲಿ ಉತ್ಸಾಹದಿಂದ ನಡೆಯಿತು. ಕಾರ್ಯಾಗಾರದಲ್ಲಿ ದಕ್ಷಿಣ ಭಾರತ ವಿಭಾಗೀಯ ಮುಖ್ಯ ಕಾರ್ಯದರ್ಶಿ ಪುರುಷೋತ್ತಮ ಶಾಸ್ತ್ರಿ (ರಾಜಮಂಡ್ರಿ, ಆಂಧ್ರ ಪ್ರದೇಶ), ವಿಭಾಗೀಯ ವಿತ್ತ ಕಾರ್ಯದರ್ಶಿ ರಾಜಗೋಪಾಲ್ ಪೈ (ಕೋಚಿ, ಕೇರಳ), ಜಂಟಿ ಕಾರ್ಯದರ್ಶಿ ಎಂ. ಆರ್‌. ಭಾರ್ಗವ (ಬೆಂಗಳೂರು), ಶಿವರಾಮ್ ಶೆಣೈ (ಬೆಂಗಳೂರು) ಹಾಗೂ ಉತ್ತರ ಪ್ರಾಂತ್ಯದ ಎಲ್ಲಾ ಶಾಖೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.  

ಅಕ್ಷತಾ ಮೋರೆ ಸಂಪೂರ್ಣ್‌ ವಂದೇ ಮಾತರಂ ಪ್ರಸ್ತುತ ಪಡಿಸಿದರು. ಗಣ್ಯರು ದೀಪ ಬೆಳಗಿಸುವ ಮೂಲಕ ಭಾರತಮಾತೆ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬೆಳಗಾವಿ ಶಾಖೆಯ ಅಧ್ಯಕ್ಷ ವಿನಾಯಕ ಮೋರೆ ಸ್ವಾಗತಿಸಿ ಪ್ರಾಸ್ತಾವಿಕ ಮಾಡಿದರು. ಪ್ರಾಂತೀಯ ಅಧ್ಯಕ್ಷ ಎಸ್‌.ಎಸ್‌.ಹಿರೇಮಠ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಹಿರಿಯ ಸದಸ್ಯ ಪ್ರಾಚಾರ್ಯ ವಿ. ಎನ್‌. ಜೋಶಿಯವರ ಉದ್ಘಾಟನಾ ಭಾಷಣ ನೀಡಿದರು.  

ಎಮ್‌. ಆರ್‌. ಭಾರ್ಗವ ಅವರು ಕಾರ್ಯಾಗಾರದ ಗುರಿಗಳು ಮತ್ತು ನೀತಿಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಪುರುಷೋತ್ತಮ ಶಾಸ್ತ್ರಿ ಅವರು ಸಮ್ಮೇಳನದ ಶಿಷ್ಟಾಚಾರ ಮತ್ತು ಪಂಚ ಪರಿವರ್ತನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ರಾಜಗೋಪಾಲ್ ಪೈ ಅವರು ಹಣಕಾಸು ಯೋಜನೆ ಕುರಿತು ಮಾರ್ಗದರ್ಶನ ನೀಡಿದರು. ಡಾ. ಜೆ. ಜಿ. ನಾಯಕ್ ಅವರು ಆದರ್ಶ ಶಾಖೆ ಹೇಗಿರಬೇಕು ಎಂಬುದರ ಕುರಿತು ಅಮೂಲ್ಯವಾದ ಮಾರ್ಗದರ್ಶನ ನೀಡಿದರು.  

ಪ್ರಾಂತೀಯ ಉಸ್ತುವಾರಿ ಪುರುಷೋತ್ತಮ ದಾಸ್ ಇನಾನಿ ಅವರು ಸಂಪರ್ಕ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು. ಪಾಂಡುರಂಗ ನಾಯಕ ಅವರು ಪರಿಷತ್ತಿನ ವಿವಿಧ ರಾಷ್ಟ್ರೀಯ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾತಿ ಘೋಡೇಕರ್ ಅವರು ಸಂಸ್ಕಾರ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ಜಾನಕಿ ಪುರೋಹಿತ್ ಮಹಿಳಾ ಸಬಲೀಕರಣದ ಕುರಿತು ವಿವರಿಸಿದರು.  

ಬೆಳಗಾವಿ ಶಾಖೆಯ ಅತ್ಯುತ್ತಮ ಕೆಲಸ ಮತ್ತು ಶಿಸ್ತಿನ ಸಂಘಟನೆಗಾಗಿ ವಿಶೇಷವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಪ್ರೊ. ಅರುಣಾ ನಾಯಕ್ ನಿರ್ವಹಿಸಿದರು. ಪ್ರಾಂತ್ ಕಾರ್ಯದರ್ಶಿ ತಿರುಪತಿ ಜೋಶಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ವಿನಾಯಕ ಘೋಡೇಕರ್, ಕೆ.ವಿ.ಪ್ರಭು, ಡಿ.ವೈ.ಪಾಟೀಲ ಸೇರಿದಂತೆ ಪರಿಷತ್ತಿನ ಸರ್ವ ಸದಸ್ಯರು ಕಾರ್ಯಾಗಾರ ಯಶಸ್ವಿಗೊಳಿಸಲು ಶ್ರಮಿಸಿದರು.  

 ಬೆಳಗಾವಿಯಲ್ಲಿ ನಡೆದ ಭಾರತ ವಿಕಾಸ ಪರಿಷತ್ತಿನ ಪ್ರಾಂತೀಯ ಕಾರ್ಯಾಗಾರದಲ್ಲಿ ಪುರುಷೋತ್ತಮ ಶಾಸ್ತ್ರಿ, ಎಂ. ಆರ್‌. ಭಾರ್ಗವ, ರಾಜಗೋಪಾಲ್ ಪೈ, ಎಸ್‌. ಎಸ್‌. ಹಿರೇಮಠ್, ವಿನಾಯಕ್ ಮೋರೆ, ಪಾಂಡುರಂಗ ನಾಯಕ್, ಸ್ವಾತಿ ಘೋಡೇಕರ್ ಮತ್ತು ವಿವಿಧ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.