ಪ್ರಣಬ್ ಮುಖರ್ಜಿ, ಡಾ ಹಜಾರಿಕಾ, ನಾನಾಜಿ ದೇಶ್ಮುಖ್ ಅವರಿಗೆ ಭಾರತರತ್ನ

ನವದೆಹಲಿ, ಆಗಸ್ಟ್ 8        ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಗಾಯಕ ಭೂಪೇನ್ ಹಜಾರಿಕಾ, ಸಾಮಾಜ ಸೇವಕ ನಾನಾಜಿ ದೇಶ್ಮುಖ್ ಅವರುಗಳಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವ "ಭಾರತ ರತ್ನ" ಪ್ರಶಸ್ತಿಯನ್ನು ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್ ಪ್ರದಾನ ಮಾಡಲಿದ್ದಾರೆ.   

ಅಸ್ಸಾಂನ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಗಾಯಕ ಭೂಪನ್ ಹಜಾರಿಕಾ ಮತ್ತು ಸಮಾಜ ಸೇವಕ ನಾನಾಜಿ ದೇಶ್ ಮುಖ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. 

2012 ರಿಂದ 2017 ರವರೆಗೆ ರಾಷ್ಟ್ರಪತಿಯಾಗಿದ್ದ  ಮುಖಜರ್ಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು.  

ಅಸ್ಸಾಂನ ಖ್ಯಾತ ಹಿನ್ನೆಲೆ ಗಾಯಕ, ಗೀತ ರಚನೆಕಾರ, ಸಂಗೀತಗಾರ, ಗಾಯಕ, ಕವಿ ಮತ್ತು ಚಲನಚಿತ್ರ ನಿರ್ಮಾಪಕ ಭೂಪೆನ್ ಹಜರಿಕಾ ಅವರನ್ನು ಸುಧಾಕಾಂತ ಎಂದೇ  ಕರೆಯಲಾಗುತ್ತಿದೆ ಅವರ ಗೀತೆಗಳು  ಅಸ್ಸಾಮಿ ಭಾಷೆಯಲ್ಲಿದ್ದರೂ  ಅಸ್ಸಾಂನ ಜೊತೆಗೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲೂ  ಅವರು ಮತ್ತು ಅವರ ಹಾಡುಗಳು ಬಹಳ  ಜನಪ್ರಿಯವಾಗಿವೆ. 

2011 ರ ನವೆಂಬರ್ 5 ರಂದು ನಿಧನರಾದ ಡಾ.ಹಜಾರಿಕಾ ಅವರು ಈ ಹಿಂದೆ 1975 ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1987), ಪದ್ಮಶ್ರೀ (1977), ಪದ್ಮಭೂಷಣ(2001), ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ (2008) ಜೊತೆಗೆ ಸಿನಿಮಾ ವಲಯದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1992) ಗಳು ಅವರ  ಮುಡಿಗೇರಿವೆ. ಅದರ ಜೊತೆಗೆ ಈಗ ಭಾರತ ರತ್ನ ಸಹ ಮುಡಿಗೇರುತ್ತಿದೆ.   

ಅವರಿಗೆ ಮರಣೋತ್ತರವಾಗಿ 2012 ರಲ್ಲಿ  ಪದ್ಮವಿಭೂಷಣ ನೀಡಲಾಗಿತ್ತು.  

ಸಾಮಾಜಿಕ ಕಾರ್ಯಕರ್ತ, ನಾನಾಜಿ ದೇಶ್ ಮುಖ್ ಅವರು  ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸ್ವಾವಲಂಬನೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತೀಯ ಜನ ಸಂಘದ ಮುಖಂಡರಾಗಿ  ಮತ್ತು ರಾಜ್ಯಸಭೆಯ ಮಾಜಿ ಸದಸ್ಯರೂ ಆಗಿದ್ದ ನಾನಾಜಿ ದೇಶಮುಖ್ ಅವರಿಗೆ ಈ  ಹಿಂದೆ ಪದ್ಮವಿಭೂಷಣ ನೀಡಿ  ಗೌರವಿಸಲಾಗಿತ್ತು.  

ಕಳೆದ 2015 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ  ಖ್ಯಾತ ಶಿಕ್ಷಣ ತಜ್ಞ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ ಮದನ್ ಮೋಹನ್ ಮಾಳವೀಯಾ  ಅವರಿಗೆ ಮರಣೋತ್ತರವಾಗಿ  ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.