ಬಳ್ಳಾರಿ, ಏ.30: ಈ ಕೋವಿಡ್ -19 ರ ಸಮಯದಲ್ಲಿ ಮತ್ತು ತದನಂತರದ ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಂಬಲಿಸಲು ಮತ್ತು ಪರಿಹರಿಸಲು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸಚರ್್ ಅಂಡ್ ಟ್ರೈನಿಂಗ್(ಎನ್ಸಿಇಆರ್ಟಿ) ಮುಂದಾಗಿದ್ದು, ಶಾಲಾ ಮಕ್ಕಳಿಗೆ ಕೌನ್ಸೆಲಿಂಗ್ ಸೇವೆಯ ಮೂಲಕ ಅವರ ಸಮಸ್ಯೆಗೆ ಪರಿಹಾರ ಒದಗಿಸಲು ನಿರ್ಧರಿಸಿದೆ. ಈ ಕಾರ್ಯದಲ್ಲಿ ತರಬೇತು ಕೌನ್ಸಿಲರ್ ಆಗಿ ದೋಣಿಮಲೈನ ಕೇಂದ್ರೀಯ ವಿದ್ಯಾಲಯದ ಟಿ.ಭಾನುಪ್ರಸಾದ್ ಆಯ್ಕೆಯಾಗಿದ್ದಾರೆ.
ತರಬೇತು ಪಡೆದ ಕೌನ್ಸಿಲರ್ ಆಗಿ ಆಯ್ಕೆಯಾಗಿರುವ ಟಿ.ಭಾನುಪ್ರಸಾದ್ ಅವರು ದಕ್ಷಿಣ ಭಾರತದ ಶಾಲಾ ಮಕ್ಕಳಿಗೆ ಕೌನ್ಸೆಲಿಂಗ್ ಸೇವೆ ನೀಡುವ ನಿಟ್ಟಿನಲ್ಲಿ ಎನ್ಸಿಇಆರ್ಟಿ ಗುರುತಿಸಿರುವ 43 ಜನರಲ್ಲಿ ಇವರು ಒಬ್ಬರು ಎಂಬುದು ವಿಶೇಷ.
ಟಿ.ಭಾನುಪ್ರಸಾದ್ ಅವರು ಕೋವಿಡ್-19 ವೈರಾಣು ಕುರಿತು ಮಕ್ಕಳಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಎದುರಿಸುವುದು ಹೇಗೆ ಎಂಬುವುದರ ಕುರಿತು ಮಕ್ಕಳಲ್ಲಿ ಅರಿವು ಜಾಗೃತಿ ಮೂಡಿಸಲಿದ್ದಾರೆ.
ಪ್ರಸ್ತುತ ಕರೋನಾ ವೈರಸ್ ಸಾಂಕ್ರಾಮಿಕವು ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರುವ ಪರಿಸ್ಥಿತಿಯಾಗಿದೆ. ಸಾಂಕ್ರಾಮಿಕವು ದುಃಖ, ಭಯ, ಆತಂಕ, ಸಹಾಯ, ಅನಿಶ್ಚಿತತೆ, ಅನಾಸಕ್ತಿ ಮತ್ತು ಹತಾಶತೆಯಂತಹ ಬಲವಾದ ಭಾವನೆಯನ್ನು ಉಂಟುಮಾಡಿದೆ.
ಈ ಕೋವಿಡ್ -19 ರ ಸಮಯದಲ್ಲಿ ಮತ್ತು ತದನಂತರದ ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಂಬಲಿಸಲು ಮತ್ತು ಪರಿಹರಿಸಲು, ಎನ್ಸಿಇಆರ್ಟಿಯು ತಸನ್ನ ತರಬೇತಿ ಪಡೆದ ಸಲಹೆಗಾರರ ಮೂಲಕ ಶಾಲಾ ವಿದ್ಯಾಥರ್ಿಗಳಿಗೆ ಸಮಾಲೋಚನೆ ಸೇವೆಗಳನ್ನು ನೀಡಲಾಗುತ್ತದೆ.
ಶಾಲಾ ಮಕ್ಕಳು ತರಬೇತುದಾರ ಕೌನ್ಸಿಲರ್ ಟಿ.ಭಾನುಪ್ರಸಾದ್ ಅವರ ಮೊ: 9885588143 ಅಥವಾ ಇ ಮೇಲ್ ಐಡಿ : ಛಚಿಟಿಣಠಿಛಿಜ@ರಟಚಿಟ.ಛಿಠಟ ಮುಖಾಂತರ ಅವರನ್ನು ಬೆಳಗ್ಗೆ 10ರಿಂದ ಸಂಜೆ4ರವರೆಗೆ ವಾಟ್ಸ್ ಆ್ಯಪ್, ಮೇಲ್ ಮತ್ತು ಕರೆ ಮಾಡುವುದರ ಮೂಲಕ ಸಂಪಕರ್ಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಸ್ಮಿಕ 12 ಕುರಿಗಳ ಸಾವು