ಮಾಂಜರಿ 28: ಗ್ರಾಮದಲ್ಲಿ ಸದ್ಗುರು ಬಾಬಾಜಿ ಭಿಸಲೆ ಮಹಾರಾಜರ 105 ನೇ ಪುಣ್ಯಸ್ಮರಣೆಯ ನಿಮಿತ್ಯ ಹಮ್ಮಿಕೊಂಡ ನಮೋತ್ಸವ ಸಮಾರಂಭದಲ್ಲಿ ಇಂದು ಪಂಢರಪೂರದ ಪಂಚಮುಖಿ ಮಾರುತಿ ಮಠದ ದತ್ತಾತ್ರೇಯ ಕೋಲ್ಹಾಟಕರ ಇವರಿಗೆ ಭಕ್ತಿ ಭೂಷಣ ಪ್ರಶಸ್ತಿಯನ್ನು ಶಾಕಿನ ಹಸೂರಿನ ಭಾಹುಸಾಬ ಪಾಟೀಲ ಮಹಾರಾಜರು ಪ್ರದಾನ ಮಾಡಿದರು.
ಢೋಣೆವಾಡಿ ಗ್ರಾಮದ ಹರಿಭಕ್ತ ದತ್ತಾತ್ರಯ ಮಾಳಿ ಇವರಿಗೆ ನಿಷ್ಠಾವಂತ ವಾರಕರಿ ಪ್ರಶಸ್ತಿಯನ್ನು ಬಾಬಾಸಾಬ ಭಿಸಲೆ ಮಹಾರಾಜ ಪ್ರಧಾನ ಮಾಡಿದರು. ವಿಠ್ಠಲ ಮಾಳಿ ಧ್ವಜಾರೋಹನ ಮತ್ತು ನಾಥಾಜಿ ಜಾಧವ ಇವರು ಪೂಜೆಯ ನಂತರ ನಮೋತ್ಸವಕ್ಕೆ ಚಾಲನೆ ನೀಡಿದರು,
ವಿವೇಕಾನಂದ ಶಾಸ್ತ್ರೀ ,ಭಾವುಸಾಹೇಬ ಪಾಟೀಲ ,ಭಾಗವತ ಸಂತ ಇವರಿಂದ ಕಿರ್ತನ ನಡೆಯಿತುಮತ್ತು ರಾಮಚಂದ್ರ ದೇಶಮುಖ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಹರಿದಾಸ ಬೋರಾಟೆ, ವಿಠ್ಠಲ ಬಾಬಬರ ಮುಖ್ಯ ಅತಿಥಿಗಳಾಗಿದ್ದರು. ಬಾಬಾಸಾಹೇಬ ಭಿಸಲೆ ಮಾಹಾಜರ ಮುಂದಾಳತ್ವದಲ್ಲಿ ಪಲ್ಲಕ್ಕಿ ಮೆರವಣಿಗೆ ಮತ್ತು ಮಹಾಪ್ರಸಾದದೊಂದಿಗೆ ನಮೋತ್ಸವ ಉತ್ಸವ ಸಮಾರೋಪಗೊಂಡಿತು.