ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮ

ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮ Bhakti Bhavana cultural programme

ಲೋಕದರ್ಶನ ವರದಿ 

ಹಂಪಿ 31: ದಿ. 02.04.2026 ರಂದು ಗುರುವಾರ ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಹಂಪಿ ಜಾತ್ರೆಯ ಪ್ರಯುಕ್ತ 30ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಜಗದ್ಗುರು ಶಂಕರಾಚಾರ್ಯ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು ಹಂಪಿ,ರವರು ವಹಿಸುವರು, ಉದ್ಘಾಟನೆಯನ್ನು ಹೆಚ್‌.ಆರ್‌.ಗವಿಯಪ್ಪ, ಮಾನ್ಯ ಶಾಸಕರು, ವಿಜಯನಗರ ಕ್ಷೇತ್ರ, ಹೊಸಪೇಟೆ ರವರು ನೆರವೇರಿಸುವರು, ಮುಖ್ಯ ಅಥಿತಿಗಳಾಗಿ ಶೃತಿ ಎಂ.ಮಳ್ಳಪ್ಪಗೌಡ್ರು ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಹೊಸಪೇಟೆ, ಸಿದ್ದಲಿಂಗೇಶ ಕೆ ರಂಗಣ್ಣವರ್ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲೆ. ವಹಿಸುವರು. ಮತ್ತು ವಿರುಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ.ಆಂಜನೇಯಲು ಅಧ್ಯಕ್ಷತೆ ವಹಿಸುವರು, ಗಂಗಾಧರ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ. ಹಂಪಿ. ಮಾಜಿ ಗ್ರಾ.ಪಂ. ಅಧ್ಯಕ್ಷರಾದ ರಜನಿ.ಕೆ.ಷಣ್ಮುಖಗೌಡ, ಸದಸ್ಯರಾದ ಕೆ.ಗೋಪಾಲ ಕಡ್ಡಿರಾಂಪುರ, ಮಾಜಿ ಗ್ರಾ.ಪಂ. ಉಪಾಧ್ಯಕ್ಷರಾದ ಹನುಮಂತಪ್ಪ, ಪಂಪಾಪತಿ ಅಂಗಡಿ ಕೊಟ್ಟೂರು (ಕಡ್ಡಿರಾಂಪುರ), ಚಂದ್ರಶೇಖರ ಹಿಟ್ನಾಳ್ (ಕೊಟ್ಟೂರು), ಇವರುಗಳ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಧುಸೂಧನ್‌ಯಾದವ್‌ರವರಿಂದ ಸುಗಮ ಸಂಗೀತ, ಮಲ್ಲಿಕಾರ್ಜುನ ತುರುವನೂರು ಇವರಿಂದ ಹಿಂದುಸ್ಥಾನಿ ಗಾಯನ, ಅಂಗಡಿ ಸಮರ್ಥ ಕಡ್ಡಿರಾಂಪುರ, ಕು.ಸ್ಪೂರ್ತಿ ಭಟ್ ಹುಲಿಗಿ, ಸುಮಾ ಕಾಳಘಟ್ಟ, ಇವರಿಂದ ಭಕ್ತಿ ಗೀತೆಗಳು, ಧಾರ್ಮಿಕ ಚಿಂತನೆ ಶ್ರೀ ಮೋಹನ್ ಚಿಕ್‌ಭಟ್ ಜೋಶಿರವರಿಂದ, ಯಲ್ಲಪ್ಪ ಬಂಡಾರದಾರ್‌ರವರಿಂದ ಜಾನಪದ ಗೀತೆಗಳು, ಅಂಜಲಿ ಭರತನಾಟ್ಯ ಕಲಾಕೇಂದ್ರ ಹೊಸಪೇಟೆ ಇವರಿಂದ ಭರತನಾಟ್ಯ, ಸಮೂಹ ನೃತ್ಯ, ಪಂಡಿತ್ ಪುಟ್ಟರಾಜ ಶಾಸ್ತ್ರೀಯ ನೃತ್ಯ ಅಕಾಡೆಮಿ ಹಗರಿಬೊಮ್ಮನಹಳ್ಳಿ ಇವರಿಂದ, ತಬಲದಲ್ಲಿ ಯೋಗೇಶ್ ಹೊಸಪೇಟೆ, ಸತ್ಯನಾರಾಯಣ ಭಟ್ ಹುಲಿಗಿ, ಕೀಬೋರ್ಡ್‌ನಲ್ಲಿ ಮಹೇಶ್ ಆಚಾರ್ ಹೊಸಪೇಟೆ, ಇನ್ನು ವಿವಿಧ ಕಲಾವಿದರಿಂದ ಕಾರ್ಯಕ್ರಮವು ಜರುಗುವವು ಎಂದು ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ ತಿಳಿಸಿದರು.