ಪ್ರಸಾದ್ ಅಬ್ಬಯ್ಯ ಸಚಿವರಾಗಬೇಕು: ಕಮಲರತ್ನ ಬಂತೇಜಿ ಆಗ್ರಹ

ಪ್ರಸಾದ್ ಅಬ್ಬಯ್ಯ ಸಚಿವರಾಗಬೇಕು: ಕಮಲರತ್ನ ಬಂತೇಜಿ ಆಗ್ರಹ   Prasad Abbey should be minister: Kamal Ratna Banteji demands

ಲೋಕದರ್ಶನ ವರದಿ 

     ಹಾವೇರಿ 15 : ಮುಂಬೈ ಕರ್ನಾಟಕದ ಶೋಷಿತ ಸಮುದಾಯದ ಬಡವರ ಆಶಾಕಿರಣ ಆಗಿರುವಂತಹ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯರವರು ಸತತ ಮೂರು ಬಾರಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ  ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ ಅವರು ಪ್ರಸಾದ ಅಬ್ಬಯ್ಯರವರಿಗೆ ಸಚಿವ ಸ್ಥಾನ ನೀಡಬೇಕೆಂದು ಬಳ್ಳಾರಿ ಬುದ್ಧವಿಹಾರದ ಪರಮಪೂಜ್ಯ ಕಮಲರತ್ನ ಬಂತೇಜಿ ಅವರು ಒತ್ತಾಯಿಸಿದರು. ನಗರದಲ್ಲಿನ ಅಶೋಕ ಮೌರ್ಯ ಸಭಾಂಗಣದಲ್ಲಿ ಹಾವೇರಿ ಜಿಲ್ಲಾ ಪ್ರಸಾದ ಅಬ್ಬಯ್ಯರವರ ಅಭಿಮಾನಿ ಬಳಗದವರು ಆಯೋಜಿಸಿದ ಸಭೆಯಲ್ಲಿ ಅವರು ಕಾಂಗ್ರೆಸ್ ವರಿಷ್ಠರಿಗೆ ಪರಮಪೂಜ್ಯರು ಒತ್ತಾಯಿಸಿದರು. 

      ಧಾರವಾಡ ಜಿಲ್ಲೆಯು ಬಿಜೆಪಿಯ ಭದ್ರಕೋಟೆಯಲ್ಲಿ ಜನರ ಪ್ರೀತಿ ವಿಶ್ವಾಸ ಗಳಿಸಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸ ಗಳಿಸುವ ಮೂಲಕ ಈ ಬಾಗದ ಎಲ್ಲಾ ವರ್ಗದ ಜನರಿಗೆ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ.ಸರಳ  ವ್ಯಕ್ತಿತ್ವ ಹೊಂದಿರುವ ಇವರು  ಧ್ವನಿಯಿಲ್ಲದವರಿಗೆ ಸಹಾಯ ಸಹಕಾರ ಮಾಡುವ ಮನೋಭಾವ ಉಳ್ಳವರಾಗಿದ್ದಾರೆ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಜಿ, ಲೋಕಸಭೆ ವಿರೋಧ ಪಕ್ಷದನಾಯಕರಾದ ರಾಹುಲ್ ಗಾಂಧಿ,ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ, ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ, ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯಜೀ, ಉಪ ಮುಖ್ಯಮಂತ್ರಿಗಳಾದ ಡಾ ಜಿ.ಪರಮೇಶ್ವರ ಅವರು ಹಾಗೂ ಇನ್ನಿತರ ನಾಯಕರು  ಪ್ರಸಾದ ಅಬ್ಬಯ್ಯರವರಿಗೆ ಸಚಿವ ಸ್ಥಾನ ನೀಡಲು ಸಹಕಾರ ನೀಡಬೇಕು.

      ಪ್ರಸಾದ ಅಬ್ಬಯ್ಯರವರು ಯುವ ನಾಯಕರಾಗಿದ್ದು ರಾಜ್ಯ ಮಟ್ಟದಲ್ಲಿ ಓಡಾಡಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸುವ ಸಾಮರ್ಥ್ಯವನ್ನು ಹೊಂದಿವರಾಗಿದ್ದಾರೆ.ಇವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಪರಮಪೂಜ್ಯ ಕಮಲರತ್ನ ಬಂತೇಜಿ ಅವರು ಸಲಹೆಯನ್ನು ನೀಡಿದರು.  ಈ ಸಂದರ್ಭದಲ್ಲಿ  ಹಾವೇರಿ ಜಿಲ್ಲಾ ಪ್ರಸಾದ ಅಬ್ಬಯ್ಯರವರ ಅಭಿಮಾನಿ ಬಳಗದ ಮುಖಂಡರಾದ  ಚೆನ್ನಮ್ಮ ಕೆ.ವಿ, ನಿರ್ಮಲಾ ಅಂಟಗಣಿ,ಶಾಂತಾ ಹೋಸೂರು,ಉಳುವಪ್ಪ ಕಲಾದಗಿ,ಗುಡ್ಡಪ್ಪ ಹೊಸೂರು, ಶಿವಲೀಲಾ ಹೋಸೂರು,ಕರಿಯಪ್ಪ,ಕಾಂತೇಶ ಹೊಳೆಯಪ್ಪನವರ,ದುರ್ಗವ್ವ ಪೂಜಾರ ಪಾಲ್ಗೊಂಡಿದ್ದರು.