ಲೋಕದರ್ಶನ ವರದಿ
ಸಿಂದಗಿ , 30: ಹಾಲುಮತ ಸಮಾಜದ ಬಂಧುಗಳು ಶೈಕ್ಷಣಿಕವಾಗಿ ಅಭಿವೃದ್ಧಿಹೊಂದಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರುಬರ ಸಂಘ ಹಮ್ಮಿಕೊಂಡಿದ್ದ ಭಕ್ತ ಕನದಾಸ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನದಾಸರ ಜಯಂತಿ ಆಚರಣೆ ಮಾಡದರೆ ಸಾಲದು. ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು. ಮಕ್ಕಳಿಗೆ ಹೇಳಿಕೊಡಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಕನಕದಾಸರ ಜಯಂತಿ ಆಚರಣೆಗೆ ಅರ್ಥಬರುತ್ತದೆ ಎಂದು ಹೇಳಿದರು.
ಕುರುಬರ ಸಂಘ ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ದಾಸ ಸಾಹಿತ್ಯದಲ್ಲಿ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿವರೆಂದರೆ ಅದು ಸಂತ ಕನಕದಾಸರು. ಅವರಿಗೆ ಶ್ರೀಹರಿ ಬೇಟಿಯಾದಾಗ ಏನು ಬೇಕು ಎಂದು ಕೇಳಿದಾಗ ನನಗೆ ಜ್ಞಾನ-ಭಕ್ತಿ ನೀಡು ಎಂದು ಕೇಳಿದವರು ಕನಕದಾಸರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದುಕೊಳ್ಳೋಣ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಶ್ರೀಶೈಲ ಕೌಲಗಿ ಅವರು ಈಶ್ವರಪ್ಪ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.
ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಯುವ ಕುರುಬ ಸಮಾಜದ ರಾಜ್ಯಾಧ್ಯಕ್ಷ ಬಿ.ಎಂ.ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ಕನರ್ಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರು, ಮುಜರಾಯಿ ಇಲಾಖೆಯ ಸದಸ್ಯೆ ಟಿ.ವೇಂಕಟಲಕ್ಷ್ಮಿ ಬಸವಲಿಂಗರಾಜು, ಎಐಸಿಸಿ ಪ್ರಧಾನಕಾರ್ಯದಶರ್ಿ ನಾಗರತ್ನ, ಕುರುಬರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಹಿರೇಕುರಬರ ಸೆರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ಮೇರವಣಿಗೆ : ಕಾಯರ್ಯಕ್ರಮದ ಪೂರ್ವದಲ್ಲಿ ಸಂತ ಕನಕದಾಸರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮೇರವಣಿಗೆ ಮಾಡಲಾಯಿತು. ಈ ಮೇರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಸಕಲ ವಾದ್ಯ ಕಲಾವಿದರು, ಡೊಳ್ಳಿನ ಕಲಾವಿದರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಹಾಲುಮತ ಸಮಾಜದ ಬಾಂಧವರು ಭಾಗವಹಿಸಿದ್ದರು.
ಸಿದ್ದು ಬುಳ್ಳಾ ಸ್ವಾಗತಿಸಿದರು. ಬಿ.ಎಚ್.ಜೋಗಿ ನಿರೂಪಿಸಿದರು