ಬಿಸಿಎಂ ಇಲಾಖೆಯ ವತಿಯಿಂದ ಭಜಂತ್ರಿ ಬೀಳ್ಕೊಡುಗೆ

ರಾಣೇಬೆನ್ನೂರ03: ಈ ಭೂಮಿಯ ಮೇಲೆ ಜನ್ಮವೆತ್ತಿದ ಪ್ರತಿಯೊಬ್ಬರೂ ಮತ್ತೆ ಭೂಮಿಯೊಳಗೆ ಲೀನವಾಗಲೇಬೇಕು. ಭೂಮಿಗೆ ಬರುವಾಗ ಮತ್ತು ಭೂಮಿಯೊಳಗೆ ಹೋಗುವಾಗ ಮಾಡಿದ ಪರೋಪಕಾರಿಯ ಸಮಾಜಸೇವೆಯೇ ಶಾಶ್ವತವಾಗಿ ಉಳಿಯುತ್ತದೆ. ಈ ಹಿನ್ನಲೆಯಲ್ಲಿ ಎಲ್ಲರೂ ಒಳಿತಾಗುವ ಹಾಗೂ ಇತರರಿಗೆ ಮಾದರಿಯಾಗುವ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಚ್.ಎ.ಜಮಖಾನೆ ಹೇಳಿದರು.

    ಇಲ್ಲಿನ ಬಿಸಿಎಂ ಇಲಾಖೆಯಲ್ಲಿ ಏರ್ಪಡಿಸಿದ್ದ ನಿಲಯ ಮೇಲ್ವಿಚಾರಕ ಕೆಂಜೋಡೆಪ್ಪ ಭಜಂತ್ರಿಯವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಿನನಿತ್ಯ ದೇಶದಲ್ಲಿ ಜನರು ಹುಟ್ಟುತ್ತಾರೆ ಹಾಗೂ ಮರಣವನ್ನಪ್ಪುತ್ತಾರೆ. ಈ ಮಧ್ಯೆ ಉತ್ತಮ ಜೀವನ ಮಾಡಿ, ದೇಶಕ್ಕೆ ಮಾದರಿ ಆದವರೂ ಇದ್ದಾರೆ. ದೇಶದ್ರೋಹಿ ಕೆಲಸ ಮಾಡಿದವರೂ ಸಿಗುತ್ತಾರೆ. ಇದರಲ್ಲಿ ಆದರ್ಶರಾಗಿ ಬಾಳಿ ಬದುಕಿದವರ ಮಾರ್ಗದರ್ಶನದಲ್ಲಿಯೇ ಮುಂದುವರೆಯಬೇಕು ಎಂದರು.

  ಸರಕಾರಿ ಕೆಲಸ ಎಂದರೆ ದೇವರ ಕಾರ್ಯ ಎಂದರಿತು ಭಯ, ಭಕ್ತಿ, ನಿಸ್ವಾರ್ಥ ಹಾಗೂ ಪ್ರಾಮಾಣಿಕತೆಯ ಮೂಲಕ ಮಕ್ಕಳ ಸೇವೆ ಸಲ್ಲಿಸಬೇಕು. ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಇದ್ದ ಹುರುಪು ಉತ್ಸಾಹ ನಿವೃತ್ತಿಯ ಅಂಚಿನಲ್ಲಿ ಬರುವಾಗ ಇರುವುದಿಲ್ಲ. ಇತ್ತೀಚೆಗೆ ಸರಕಾರಿ ಕೆಲಸ ಮಾಡುವುದು ಬಹಳಷ್ಟು ಕಷ್ಟಕರವಾದರೂ ಸಹ ಇನ್ನೊಬ್ಬರಿಗೆ ನೋವಾಗದಂತೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಸೌಭಾಗ್ಯ ಎಲ್ಲರಲ್ಲೂ ಬರಬೇಕು ಎಂದರು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ನಿಲಯ ಮೇಲ್ವಿಚಾರಕ ಕೆಂಜೊಡೆಪ್ಪ ಭಜಂತ್ರಿಯವರು, ನನ್ನ ಸುದೀರ್ಘವಾದ ಸರಕಾರಿ ನೌಕರಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿಯು ನನಗಿದೆ. ದೇವರ ಸ್ಮರಿಸಿ ಆತ್ಮಸಾಕ್ಷಿಯಾಗಿ ಕೆಲಸ ಮಾಡಿರುವೆ. ನೌಕರಿಯ ಸಂದರ್ಭದಲ್ಲಿ ಅನೇಕ ಸಿಹಿ ಕಹಿ ಘಟನೆಗಳನ್ನು ಅನುಭವಿಸಿದ್ದೇನೆ. ಇದೀಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳೂ ಸಹ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ವಿದ್ಯಾಥರ್ಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.

  ಇದೇ ಸಂದರ್ಭದಲ್ಲಿ ಕೆಂಜೋಡೆಪ್ಪ ಭಜಂತ್ರಿಯವರಿಗೆ ವಿವಿಧ ಇಲಾಖೆಯ ಸಿಬ್ಬಂಧಿಗಳು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ನಿಲಯ ಮೇಲ್ವಿಚಾರಕರು, ಸಿಬ್ಬಂಧಿಗಳು ಸನ್ಮಾನಿಸಿ ಗೌರವಿಸಿದರು. ಕೆ.ಸಿ ಭಜಂತ್ರಿ, ಆರ್.ಎಂ.ಕನವಳ್ಳಿ, ಶಾಂತಪ್ಪ ಸಾವಕಾರ, ವೈ.ಐ.ಕೊರವರ, ರಾಜಶೇಖರ ಪಾರ್ವತೇರ, ಶಾಂತವ್ವ ಭಜಂತ್ರಿ, ಎಸ್.ಕೆ.ಹಾವನೂರ, ಎಚ್.ಎಚ್.ಓಲೇಕಾರ, ಗಿರೀಶ ಮೂಡಿಯವರ, ಶಶಿಭೂಷಣ ಕಡಕೋಳ, ಮಂಜುನಾಥ ಎಂ.ಕೆ, ಪ್ರಸಾದ ಆಲದಕಟ್ಟಿ, ಭೋಸ್ಲೆ ಹಾಗೂ ಭಜಂತ್ರಿಯವರ ಮಕ್ಕಳು ಸಂಬಂಧಿಕರು ಸೇರಿದಂತೆ ಮತ್ತಿತರರು ಇದ್ದರು.