ಇಡೀ ವಿಶ್ವದಲ್ಲಿಯೇ ಭಗವದ್ಗೀತೆ ಅತ್ಯಂತ ಶ್ರೇಷ್ಠ: ಚಲವಾದಿ

Bhagavad Gita is the greatest in the entire universe: Chalavadi

ಮುದ್ದೇಬಿಹಾಳ 29: ಇಡೀ ವಿಶ್ವದಲ್ಲಿಯೇ ಭಗವದ್ಗೀತೆಯು ಅತ್ಯಂತ ಶ್ರೇಷ್ಠವಾಗಿದೆ ಇದರಿಂದ ಮನುಷ್ಯ ಮಾನವಿಯ ಮೌಲ್ಯಗಳ ಬಿತ್ತುವ ಮತ್ತು ಸನ್ಮಾರ್ಗದ ಜೀವನಕ್ಕೆ ಅಡಿಪಾಯವಾಗಿದೆ ಈ ಹಿನ್ನೇಲೆಯಲ್ಲಿ ಸಾರ್ವತ್ರಿಕವಾಗಿ ಪ್ರತಿಯೊಬ್ಬರ ಮನೆಮನೆಗಳಲ್ಲಿ ಭಗವದ್ಗೀತೆಯ ಕುರಿತು ಅಧ್ಯಯನ ನಡೆಯಬೇಕಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ.ಚಲವಾದಿ  ಹೇಳಿದರು. 

ಪಟ್ಟಣದ  ಪಿಂಜಾರ ಕಾಲೋನಿಯಲ್ಲಿರುವ ಬಿ.ಎಸ್‌.ಸೆಂಟರಲ್ ಶಾಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ   ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು  ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-2024 ಸಂಬಂಧಿ ಶ್ಲೋಕ ಪಠಣ ಕೇಂದ್ರದಲ್ಲಿ ಮಾತನಾಡಿದರು.   ಅಧರ್ಮಕ್ಕೆ ಸಂಖ್ಯೆ ಜಾಸ್ತಿಯಿದ್ದರೂ ಜಯಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಉತ್ತಮ ನಿದರ್ಶನಗಳೆಂದರೆ ಕೌರವರೆ ಆಗಿರುತ್ತಾರೆ. ಕಡಿಮೆ ಸಂಖ್ಯೆಯನ್ನು ಹೊಂದಿದ್ದ ಪಾಂಡವರು ನ್ಯಾಯದ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಮಹಾಭಾರತ ಕಥೆ ಇಂದಿಗೂ ಜೀವಂತ ನೆಲೆಯಾಗಿರಲು ಅದರ ಆದರ್ಶವೇ ಕಾರಣವಾಗಿದೆ. ಆದರ್ಶಗಳನ್ನು ಅರಿತು ಬದುಕ ಬೇಕಾಗಿದೆ ಎಂದು ಹೇಳಿದರು. 

ಶಾಲೆಯ ಪ್ರಾಚಾರ್ಯರಾದ  ರುತು ಆರ್ ರವರು ಮಾತನಾಡಿ ನೈತಿಕತೆಯನ್ನು ಬೆಳಿಸಿಕೊಳ್ಳ ಬೇಕಾಗಿದೆ. ಯಾವಾಗಲೂ ಉತ್ತಮವಾದ ಮಾತುಗಳನ್ನೆ ಕೇಳುತ್ತಾ, ಉತ್ತಮವಾದ ವಿಚಾರವನ್ನೆ ಆಲಿಸಿ, ಚಿಂತಿಸಿ ,ಅನುಸರಿಸಿ ನಡೆದಲ್ಲಿ ಮಾತ್ರವೇ ಬದುಕು ಉಜ್ವಲವಾಗಲು ಸಾಧ್ಯ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಉಪಾಧ್ಯಕ್ಷರಾದ ಬಿ.ಪಿ.ಕುಲಕರ್ಣಿ, ಶಿಕ್ಷಕರಾದ ಸಾವಿತ್ರಿ ಅಂಬಿಗೇರ, ಶಿವಕುಮಾರ ಸಾರದಳ್ಳಿ,  ಸವಿತಾ ರಾಠೋಡ, ವಿದ್ಯಾ ಅಮಾಸೆಗೌಡರ್, ಶಶಿಕಲಾ ರಾಮವಡಗಿ, ಲಕ್ಷ್ಮೀ ಬೋಳಶೆಟ್ಟಿ, ರಂಜಿತಾ ಹೆಗಡೆ, ಸಂಚಾಲಕ ರಾಮಚಂದ್ರ ಹೆಗಡೆ ಸೇರಿದಂತೆ ಇತರರು ಹಾಜರಿದ್ದರು.