ಬೆಳಗಾವಿ 08: ಲಯನ್ಸ್ ಕ್ಲಬ್ ಆಫ್ ಬೆಳಗಾವಿ, ಲಿಯೋ ಕ್ಲಬ್ ಆಫ್ ಬೆಳಗಾವಿ, ಮತ್ತು ಶ್ರೀ ಕಪಿಲೇಶ್ವರ ಮಹಾದೇವ ವಿಶ್ವಸ್ಥ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ದಿ. 15ರಿಂದ 27 ಏಪ್ರಿಲ್ 2025 ರವರೆಗೆ, ಪ್ರತಿದಿನ ಬೆಳಿಗ್ಗೆ 6:30 ರಿಂದ 8:00 ಗಂಟೆವರೆಗೆ, ಶ್ರೀ ಕಪಿಲೇಶ್ವರ ದೇವಸ್ಥಾನ, ಬೆಳಗಾವಿಯಲ್ಲಿ ಭಗವದ್ಗೀತಾ ಶ್ಲೋಕ ಸ್ಪರ್ಧೆ ಆಯೋಜಿಸಲಾಗಿದೆ.
ಈ ಪವಿತ್ರ ಕಾರ್ಯಕ್ರಮದ ಉದ್ದೇಶ 5ರಿಂದ 25 ವರ್ಷದೊಳಗಿನ ಮಕ್ಕಳಿಗೆ ಹಾಗೂ ಯುವಜನತೆಗೆ ಆಧ್ಯಾತ್ಮಿಕ ಶಕ್ತಿ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮೂಲಕ ಭಾರತೀಯ ಸಂಸ್ಕೃತಿಯ ಮಹತ್ವವನ್ನು ತಿಳಿಸುವುದು.
ಕಾರ್ಯಕ್ರಮದ ವಿಶೇಷತೆಗಳು: ಪ್ರತಿದಿನ ಬೆಳಿಗ್ಗೆ 6:30 ರಿಂದ 8:00 ಗಂಟೆವರೆಗೆ ಶ್ಲೋಕ ಪಾಠ ತರಗತಿಗಳು, ಇಸ್ಕಾನ್ ನ ಗುರುಗಳು ಕನ್ನಡ ಮತ್ತು ಮರಾಠಿಯಲ್ಲಿ ಶ್ಲೋಕ ಪಾಠ ಮಾಡುತ್ತಾರೆ ಮತ್ತು ಅರ್ಥ ತಿಳಿಸುತ್ತಾರೆ, ಪ್ರತಿದಿನ ಸಾತ್ವಿಕ ಉಪಹಾರ ಮತ್ತು ಹಾಲಿನ ವ್ಯವಸ್ಥೆ, ಸ್ಪರ್ಧೆಯ ಅಂತ್ಯದಲ್ಲಿ ಆಕರ್ಷಕ ಬಹುಮಾನಗಳ ವ್ಯವಸ್ಥೆ ಮಾಡಲಾಗಿದೆಈ 10 ದಿನಗಳಲ್ಲಿ ಮಕ್ಕಳಿಗೆ 10 ಶಕ್ತಿಶಾಲಿ ಶ್ಲೋಕಗಳನ್ನು ಪಠಿಸಿ, ಅವುಗಳ ಅರ್ಥಗಳನ್ನು ಸಹ ವಿವರಿಸಲಾಗುತ್ತದೆ. ಇದರಿಂದಾಗಿ ಮಕ್ಕಳು ಭಗವದ್ಗೀತೆಯ ಸತ್ವವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಪೋಷಕರಿಗೆ ವಿಶೇಷ ಕರೆ:
"ಮಕ್ಕಳನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುವುದು ಪ್ರತಿಯೊಬ್ಬ ಪೋಷಕರ ಪ್ರಮುಖ ಜವಾಬ್ದಾರಿ. ಇದು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ, ಶಿಸ್ತು ಮತ್ತು ಗುಣಾತ್ಮಕ ಜೀವನದತ್ತ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೇಶದ ಪ್ರತಿಯೊಂದು ದೇವಸ್ಥಾನದಲ್ಲೂ ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳು ನಡೆಯಬೇಕೆಂಬುದು ಸಮಾಜದ ಕರ್ತವ್ಯ.
ಹೆಚ್ಚಿನ ಮಾಹಿತಿಗಾಗಿ 9448359811 / 8073468638 ಗೆ ಸಂಪರ್ಕಿಸಬಹುದು.