ವಿಜಯಪುರ 13: ವ್ಯಕ್ತಿತ್ವದ ವಿಕಸನ, ಸಾಮಾಜಿಕ ಸಾಮರಸ್ಯ ಇವು ಭಗವದ್ಗೀತಾ ಅಭಿಯಾನದ ಪ್ರಮುಖ ಉದ್ದೇಶಗಳು. ಈ ಎರಡನ್ನೂ ತಮ್ಮ ಸಂಸ್ಥೆಯ ಹೆಸರಿನಲ್ಲಿ ಹೊಂದಿರುವ ಶಾಲೆ ಸಿ ಕ್ಯಾಬ್ ಶಾಲೆ. ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಇಂದು ವಿಜಯಪುರದ ಸಿ ಕ್ಯಾಬ್ ಶಾಲೆಗೆ ಭೇಟಿ ನೀಡಿದರು.
ಅಲ್ಲಿ ಭಗವದ್ಗೀತಾ ಶ್ಲೋಕ ಪಠಣ ಹಾಗೂ ಶ್ರೀಗಳವರ ಆಶೀರ್ವಚನವು ನೆರವೇರಿತು. ಭಗವದ್ಗೀತಾ ಅಭಿಯಾನ ವಿಜಯಪುರದ ಒಂದು ಮಾದರಿ ಕಾರ್ಯಕ್ರಮವಾಯಿತು. ಸಿ ಕ್ಯಾಬ್ ಶಾಲೆಯು ಮುಸಲ್ಮಾನರ ಶಾಲೆಯಾಗಿದ್ದು ಅಲ್ಲಿ ಅಭಿಯಾನ ನಡೆದದ್ದು ಬಹಳ ವಿಶೇಷ. ಮನುಷ್ಯ ಹೇಗೆ ಅದ: ಪತನ ಹೊಂದುತ್ತಾನೆ? ವಿಷಯಗಳ ಆಕರ್ಷಣೆ ಅತಿಯಾಗಿ ಇರುವುದೇ ಅವನ ಪತನದ ದಾರಿ ಎಂದರು. ಪತನದ ದಾರಿಯನ್ನು ತಪ್ಪಿಸಿಕೊಂಡು ಉನ್ನತಿಯ ದಾರಿಯತ್ತ ಹೋಗಬೇಕು. ಅದನ್ನು ಭಗವದ್ಗೀತೆ ಕೊಡುತ್ತದೆ ಅದಕ್ಕಾಗಿ ಭಗವದ್ಗೀತೆಯನ್ನು ಎಲ್ಲರೂ ಓದಬೇಕು ಎಂದರು. ಭಗವದ್ಗೀತೆಯು ತನ್ನನ್ನು ತಾನೇ ಉದ್ದರಿಸಿಕೊಳ್ಳಬೇಕು ಎಂಬುದನ್ನು ಹೇಳುತ್ತದೆ. ಪತನ ದಾರಿಯತ್ತ ಸಾಗಬಾರದು. ಬೇಕು ಎನ್ನುವ ಆಸೆಯೇ ಅನೇಕರ ಪತನಕ್ಕೆ ಕಾರಣವಾಗುತ್ತದೆ. ಧ್ಯಾನಯೋಗವನ್ನು ಪಡೆದುಕೊಳ್ಳುವುದರ ಮೂಲಕ ತನ್ನನ್ನು ತಾನು ಉದ್ದಾರಿಸಿಕೊಳ್ಳಬೇಕು. ಉನ್ನತಿಗೆ ಕಾರಣ ಭಗವದ್ಗೀತೆಯು ಕೊಡುವ ಮಾರ್ಗ ಇದೇ. ಧ್ಯಾನ ಎಂದರೆ ನಮ್ಮ ಮನಸ್ಸನ್ನು ಭಗವಂತನಲ್ಲಿ ಏಕಾಗ್ರತೆ ಗೊಳಿಸುವುದು. ಇದರಿಂದ ಅನೇಕ ದಿವ್ಯ ಅನುಭವಗಳು ಆಗುತ್ತವೆ, ನಮ್ಮ ಓದಿನಲ್ಲಿ ಪ್ರಗತಿಯನ್ನು ಕಾಣಲು, ಉದ್ಯೋಗದಲ್ಲಿ ಪ್ರಗತಿ, ಮಾಡುವ ಕೆಲಸಗಳಲ್ಲಿ ಯಶಸ್ಸು. ಇತ್ಯಾದಿಗಳು ಲಭಿಸುತ್ತವೆ. ಇದರಿಂದ ಲಭಿಸುತ್ತದೆ. ನಮಗೆಲ್ಲರಿಗೂ ಆದರ್ಶ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿಯವರು ತಮ್ಮ ಹಾಡಿನಲ್ಲಿ " ಈಶ್ವರ ಅಲ್ಲಾ ತೇರೆ ನಾಮ್" ಎಂಬುದಾಗಿ ಸಾರಿ ಸಾರಿ ಹೇಳಿದ್ದಾರೆ. ಈಶ್ವರ ಮತ್ತು ಅಲ್ಲಾ ಇವು ಭಗವಂತನ ನಾಮಗಳೇ ಆಗಿವೆ ಎಂಬುದಾಗಿ ಹೇಳಿದ್ದಾರೆ.
ಒಟ್ಟಾರೆ ಭಗವದ್ಗೀತೆಯಿಂದ ದೊರೆಯುವ ಅನೇಕ ಒಳ್ಳೆಯ ಪ್ರಯೋಜನಗಳು ಎಲ್ಲರಿಗೂ ದೊರಕುವ ಹಾಗೆ ಆಗಲಿ ಎಂದು ಆಶಿಸಿದರು. ಸಂಸ್ಥೆಯ ಪ್ರಮುಖರಾದ ಪ್ರಾಚಾರ್ಯರು ಹೆಚ್. ಕೆ. ಯಡಹಳ್ಳಿ, ನಿರ್ದೇಶಕರು ಸಲಾಉದ್ದೀನ್ ಪುಣೇಕರ, ಕಾರ್ಯದರ್ಶಿ ಎ ಎಸ್ ಪಾಟೀಲ್ ಹಾಗೂ ಅಭಿಯಾನದ ಪ್ರಮುಖರಾದ ಅರುಣ್ ಶಹಾಪುರ, ಚಂದ್ರಶೇಖರ ಕವಟಗಿ ಇತರರು ಇದ್ದರು.