ಭಾರತೀಯ ಸಂಸ್ಕೃತಿ ಉತ್ಸವ : ಗಮನ ಸೆಳೆದ 'ನೃತ್ಯ ರೂಪಕ' 'ಎಂಥವರು ಬಂಥನಾಳ ಮಠದ ಮಹಿಮರು'

ದೇವೇಂದ್ರ ಹೆಳವರ

ವಿಜಯಪುರ, 27 : 'ಎಂಥವರೂ ಬಂಥನಾಳ ಮಠದ ಮಹಿಮರು, ಭಕ್ತರ ಅಂತರಂಗದಲ್ಲಿ ಮೆರೆವರು. ಇಂದು ಭಕ್ತರ ಅಂತರಂಗದಲ್ಲಿ ಮೆರೆವರು'.

ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳ ಜೀವನಚರಿತ್ರೆ ಕುರಿತಾದ ಈ ಹಾಡು ಕಗ್ಗೋಡದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಅನುರಣಿಸಿ ಜನರಲ್ಲಿ ಭಕ್ತಿಭಾವ ಜಾಗೃತಗೊಳಿಸಿತು.

ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ಗುರುವಾರ 'ಕೃಷಿ ಸಂಗಮ' ಕಾರ್ಯಕ್ರಮದ ನಂತರ ವಿಜಯಪುರದ ಕವಲಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯ ವಿದ್ಯಾಥರ್ಿಗಳು ಪ್ರಸ್ತುತಪಡಿಸಿದ ಬಂಥನಾಳ ಶಿವಯೋಗಿಗಳ ಜೀವನಚರಿತ್ರೆ ಕುರಿತಾದ ನೃತ್ಯ ರೂಪಕ ಎಲ್ಲರ ಮನಮುಟ್ಟಿತು.

ಸಂಗನಬಸವ ಶಿವಯೋಗಿಗಳು ವಿಜಯಪುರದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ಮಾಡಿದ ಸಾಮಾಜಿಕ ಸೇವೆ, ಜೀವನದುದ್ದಕ್ಕೂ ನಾಡಿನಾದ್ಯಂತ ಸಂಚರಿಸಿ ಧರ್ಮ ಪ್ರಚಾರ ಮಾಡಿದ

ಬಂಥನಾಳ ಶಿಯಯೋಗಿಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಧಾಮರ್ಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಈ ರೂಪಕ ಮತ್ತೊಮ್ಮೆ ನೆನಪಿಸಿ ಕೊಡುವಲ್ಲಿ ಯಶಸ್ವಿಯಾಯಿತು. 

ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ಕೊಡಬೇಕು. ಈ ದೇಶದ ಸಂಪತ್ತು ಗೋವುಗಳ ಸಂರಕ್ಷಣೆ ಮಾಡಬೇಕು ಎಂಬುದು ಬಂಥನಾಳ ಶಿವಯೋಗಿಗಳ ಕನಸಾಗಿತ್ತು. ಈ ನಿಟ್ಟಿನಲ್ಲಿ ಸಿದ್ಧೇಶ್ವರ ಸಂಸ್ಥೆಯು ವಿಜಯಪುಇರದಲ್ಲಿ ಸಿದ್ಧೇಶ್ವರ ಸಂಸ್ಥೆಯಡಿ ಪ್ರಾರಂಭಿಸಿದ ಶ್ರೀ ನೀಲಕಂಠೇಶ್ವರ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು, ಕಗ್ಗೋಡದಲ್ಲಿ ಗೋರಕ್ಷಾ ಕೇಂದ್ರ ಪ್ರಾರಂಭಿಸಿ ಗೋವುಗಳ ಸಂರಕ್ಷಣೆ ಮಾಡುವ ಮೂಲಕ ಅವರ ಕನಸನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಾಕಾರಗೊಳಿಸುತ್ತಿರುವುದನ್ನು ರೂಪಕದ ಮೂಲಕ ಪಾತ್ರಧಾರಿ ವಿದ್ಯಾಥಿಗಳು ಜನತೆಗೆ ಸಾರಿ ಸಾರಿ ಹೇಳಿದರು. 

ಈ ರೂಪಕದಲ್ಲಿ ಬಂಥನಾಳ ಶಿವಯೋಗಿಗಳು ತಮ್ಮ ಇಳಿವಯಸ್ಸಿನಲ್ಲಿ ಶಿಷ್ಯರನ್ನು ಮುಂದೆ ಕೂರಿಸಿಕೊಂಡು 'ನಾವೆಲ್ಲ ಇಲ್ಲಿ ಸಂತೀಗಿ ಬಂದೀವಿ, ಸಂತಿ ಮುಗಿದ ಮ್ಯಾಲ ಮನೀಗಿ ಹೋಗಾಗಬೇಕು. ನನ್ನ ಸಂತಿ ಪ್ರಾರಂಭ ಆಗಿ 72 ವರ್ಷ ಆಯಿತು. ನಾನಿನ್ನ ಹೋಗ್ತೀನಪಾ, ಶಿವನ ಪಾದ ಸೇರ್ತೀನಿ' ಎಂದು ಹೇಳಿದಾಗ ಶಿಷ್ಯರು 'ಅಪ್ಪರ ಹಾಗನ್ನಬ್ಯಾಡ್ರೀ, ನಮ್ಮನ್ನ ಬಿಟ್ಟು ಹೋಗಬ್ಯಾಡ್ರೀ' ಎಂದು ದು:ಖಿಸುತ್ತಿದ್ದ ದೃಶ್ಯ ಎಲ್ಲರ ಮನ ತಟ್ಟಿತು. 

ಭಗವಂತನ ಆಜ್ಞೆ ಆಯ್ತಂದ್ರ ನಾ ಇಲ್ಲಿಂದ ಹೋಗಲೇಬೇಕು. ನಾನು ಹೋದರೂ ನನ್ನ ಆಶೀವರ್ಾದ ನಿಮ್ಮೆಲ್ಲರ ಮೇಲೆ ಸದಾ ಇದ್ದೇ ಇರ್ತದ ಎಂದು ಬಂಥನಾಳ ಶಿವಯೋಗಿಗಳು ಶಿಷ್ಯರಿಗೆ ಆಶೀರ್ವದಿಸಿದ ಬಗೆಯನ್ನು ಈ ರೂಪಕದಲ್ಲಿ ವಿದ್ಯಾಥರ್ಿಗಳು ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.