ಫ್ರಾನ್ಸ್-ಬೆಲ್ಜಿಯಂ ನಡುವೆ ಮಹಾಕಾಳಗ ಗೆದ್ರೆ ಫಿಫಾ ಫೈನಲ್ಗೆ, ಸೋತ್ರೆ ಮನೆಗೆ


ಸೇಂಟ್ ಪಿಟಸರ್್ಬರ್ಗ 10: 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ದಿನಗಣನೆ ಶುರುವಾಗಿದೆ. ಕಾಲ್ಚೆಂಡಿನ ಮಹಾಕಾಳಗದಲ್ಲಿ ಬಲಿಷ್ಠ ತಂಡಗಳೇ ಟೂನರ್ಿಯಿಂದ ಹೊರನಡೆದಿದ್ದು ಇದೀಗ ಸೆಮಿಫೈನಲ್ ಪಂದ್ಯಗಳು ನಡೆಯಲಿದೆ.  

ಸದ್ಯ ಸೆಮಿಫೈನಲ್ ಪ್ರವೇಶಿಸಿರುವ ಫ್ರಾನ್ಸ್,  ಬೆಲ್ಜಿಯಂ, ಕ್ರೊವೇಷಿಯಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಿಸಲು ಸೆಣೆಸಲಿವೆ. ಮೊದಲ ಸೆಮಿಫೈನಲ್ ಪಂದ್ಯ ಇಂದು ನಡೆಯಲಿದ್ದು ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸೆಣೆಸಲಿವೆ. ಇನ್ನು ಮತ್ತೊಂದು ಪಂದ್ಯ ನಾಳೆ ನಡೆಯಲಿದ್ದು ಕ್ರೊವೇಷಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಣೆಸಲಿವೆ.  

ನಾಲ್ಕು ತಂಡಗಳಲ್ಲೂ ಖ್ಯಾತ ಫುಟ್ಬಾಲ್ ಆಟಗಾರರಿದ್ದಾರೆ. ಈ ಆಟಗಾರರು ಗೋಲು ಬಾರಿಸುವ ಮೂಲಕ ತಮ್ಮ ತಂಡ ಫೈನಲ್ ಪ್ರವೇಶಿಸಲು ಕಾರಣರಾಗುತ್ತಾರಾ ಎಂದು ಕಾದುನೋಡಬೇಕಿದೆ.  

ಫ್ರಾನ್ಸ್ ಪರ ಕೈಲ್ಯಾನ್ ಬಾಪೆ ಮತ್ತು ಆಂಟೊಯಿನ್ ಗ್ರೀಜ್ಮನ್ ಉತ್ತಮ ಫಾಮರ್್ ನಲ್ಲಿದ್ದರೆ ಅತ್ತ ಬೆಲ್ಜಿಯಂನಲ್ಲಿ ಈಡೆನ್ ಹಜಾಡರ್್ ಅವರ ಬಲವಿದೆ. ಫ್ರಾನ್ಸ್ ಈ ಬಾರಿ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.  

ಇನ್ನು ಬೆಲ್ಜಿಯಂ ಸಹ ಇಲ್ಲಿಯವರೆಗೂ ಒಂದು ಬಾರಿಯೂ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿಲ್ಲ. 1986ರ ಫಿಫಾ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು ಅಷ್ಟೆ. ಹೀಗಾಗಿ ಫೈನಲ್ ಪ್ರವೇಶಿಸಲು ಉಭಯ ತಂಡಗಳು ಪ್ರಯತ್ನಿಸಲಿದ್ದು ಇದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿವೆ.