ವಾರದಾಗ ಮೂರು ದಿನ ಬೆಳಗಾವಿ ಬೆಂಗಳೂರು ನಡುವೆ

ಬೆಳಗಾವಿ 06: ನಗರದ ಸಾಂಬ್ರಾ ವಿಮಾನ ನಿಲ್ದಾಣದಿಂದ ಅಲೈನ್ಸ ಎಅರ್ ಸಂಸ್ಥೆಯ ವಿಮಾನ ಬೆಳಗಾವಿ-ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ಹಾರಾಟ ನಡೆಸಲಿದೆ. 

ಈ ವಿಮಾನವು ಜುಲೈ 11 ರಿಂದ ಕಾಯರ್ಾರಾಂಭ ಮಾಡಲ್ಲಿದ್ದು, ಕೇವಲ ಮಂಗಳವಾರ, ಬುಧವಾರ, ಶನಿವಾರ ಮಾತ್ರ ಹಾರಾಟ ಮಾಡಲ್ಲಿದೆ. 

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಬೆಳಗಾವಿಯ ವಿಮಾನ ನಿಲ್ದಾಣ ನಿದರ್ೇಶಕ ರಾಜೇಶಕುಮಾರ ಮೌರ್ಯ ಇಂದು ನೀಡಿದ ಪ್ರಕಟನೆಯಲ್ಲಿ ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಉದ್ಯಮ ಸಂಸ್ಥೆಗಳು, ಮಾಧ್ಯಮಗಳು ಹಾಗೂ ಈ ವಿಮಾನಯಾಣ ಆರಂಭಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದ್ದಾರೆ.

ಈ ವಿಮಾನವು ಮಂಗಳವಾರದ 17-05ಗಂಟೆ ಆಗಮನ ಮತ್ತು 17 35 ಗಂಟೆಗೆ ಪ್ರಯಾಣ ಬೆಳೆಸಲಿದೆ. ಹಾಗೂ ಬುಧವಾರ ಮತ್ತು ಶನಿವಾರ 15-35 ಗಂಟೆಗೆ ಹಾರಾಟ ಮಾಡಲ್ಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಬೆಳಗಾವಿ ನಿದರ್ೇಶಕ ರಾಜೇಶಕುಮಾರ ಮೌರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.