ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಡಾ.ವಸಂತ ಗಾಣಿಗೇರ ಅವರು ಮಂಡಿಸಿದ ಎಲೆ ಕೋಸು ತರಕಾರಿಗಳಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಬೆಳೆಯ ವಿವಿಧ ಹಂತದಲ್ಲಿ ಸಿಂಪಡಿಸುವುದರಿಂದ ಮಣ್ಣಿನ ಮುಖಾಂತರ ಒದಗಿಸುವ ಒಟ್ಟು ರಸಗೊಬ್ಬರಗಳನ್ನು ಕಡಿತಗೊಳಿಸಿ ರೈತರ ಆಥರ್ಿಕ ವೆಚ್ಚವನ್ನು ಕಡಿತಗೊಳಿಸಬಹುದು ಎಂಬ ವೈಜ್ಞಾನಿಕ ಪ್ರಬಂಧಕ್ಕೆ ಅತ್ಯುತ್ತಮ ವೈಜ್ಞಾನಿಕ ಪ್ರಬಂಧ ಪ್ರಶಸ್ತಿ ಲಭಿಸಿದೆ.
ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ತೋಟಗಾರಿಕೆ ಸುಸ್ಥಿರತೆ ಮತ್ತು ಪೋಷಣೆ ಭದ್ರತೆ ಕುರಿತು ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ತೋಟಗಾರಿಕೆ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅದರಂತೆ ಡಾ.ವಸಂತ ಗಾಣಿಗೇರ ರವರ ಮಾರ್ಗದರ್ಶನದಲ್ಲಿ ಮಾಡಿದ ಸ್ನಾತಕೋತ್ತರ ವಿದ್ಯಾಥರ್ಿ ಗಜೇಂದ್ರ ಎಸ್. ಕೆ. ಇವರ ಟೊಮ್ಯಾಟೋ ಸಂಶೋಧನೆಗೆ ಅತ್ಯುತ್ತಮ ಭಿತ್ತಿ ಚಿತ್ರ ಪ್ರಶಸ್ತಿ ಬಂದಿದೆ.