ಗದಗ 18: ಗದಗ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟಶಾಸ್ತ್ರಜ್ಞ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಿ. ಎಂ. ರಫಿಯವರಿಗೆ ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ನಡೆದ 17ನೆಯ ಅಜ್ರಾ ಅಂತರಾಷ್ಟ್ರೀಯ ಸಮಾವೇಶದಲ್ಲಿ ಉತ್ತಮ ಸಂಶೋಧನಾ ಮಂಡನೆಗೆ ದ್ವಿತೀಯ ಪ್ರಶಸ್ತಿ ಲಭಿಸಿದೆ. ಸುಮಾರು 400ಕ್ಕೂ ಹೆಚ್ಚು ವಿಜ್ಞಾನಿಗಳು ಭಾಗವಹಿಸಿದ್ದ ಸಮಾವೇಶದಲ್ಲಿ "ಸೋಯಾ ಅವರೆ ಬೆಳೆಯಲ್ಲಿ ಆಫ್ರೀಕಾದ ದೈತ್ಯ ಬಸವನ ಹುಳುವಿನ ಸಮರ್ಪಕ ನಿರ್ವಹಣೆ" ಕುರಿತಾದ ಸಂಶೋಧನಾ ಪ್ರಬಂಧದ ಮಂಡನೆಗೆ ಈ ಪ್ರಶಸ್ತಿ ಲಭಿಸಿದೆ. ಇದೇ ಸಮಾವೇಶದಲ್ಲಿ ಒಂದು ಅಧಿವೇಶನಕ್ಕೆ ಸಹ-ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಮತ್ತೊಂದು ಸಂಶೋಧನಾ ಪ್ರಬಂಧ "ಪೇರಲದಲ್ಲಿ ಆಫ್ರೀಕಾದ ದೈತ್ಯ ಬಸವನ ಹುಳು ನಿರ್ವಹಣೆ" ಕುರಿತು ಮೌಖಿಕ ಪ್ರಬಂಧ ಮಂಡಿಸಿದರು.