ರೂಗಿ ಗ್ರಾಪಂಗೆ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಪ್ರದಾನ

Best Gram Panchayat Award given to Roogi Village

ರೂಗಿ ಗ್ರಾಪಂಗೆ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಪ್ರದಾನ  

ಇಂಡಿ 05: ತಾಲೂಕಿನ ರೂಗಿ ಗ್ರಾಮ ಪಂಚಾಯತಿಗೆ ಸನ್ 2023-24ನೇ ಸಾಲಿನ ನರೇಗಾ ಯೋಜನೆಯ ’ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ’ ದೊರಕಿದೆ.  ಸನ್ 2023-24ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅತ್ಯುತ್ತಮ ಕಾಮಗಾರಿಗಳನ್ನು ಅನುಷ್ಠಾನ ಮಾಡಿದ ಫಲವಾಗಿ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದ್ದು, ದಿ.5ರಂದು ಬೆಂಗಳೂರಿನ ಡಾ. ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಜರುಗಿದ ನರೇಗಾ ಹಬ್ಬ-2025 ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಗ್ರಾಪಂ ಅಧ್ಯಕ್ಷ ಸೊಮವ್ವ ಯಶವಂತ ಹೊಸಮನಿ, ತಾಪಂ ಸಹಾಯಕ ನಿರ್ದೇಶಕರಾದ ಸಂಜಯ ಖಡಗೇಖರ, ಗ್ರಾಪಂ ಪಿಡಿಒ ಬಸವರಾಜ ಬಬಲಾದ, ಟಿಐಇಸಿ ರಾಮನಗೌಡ ಸರಬಡಗಿ, ತಾಂತ್ರಿಕ ಸಹಾಯಕರಾದ ಈರಣ್ಣ ಇಂಡಿ ಸೇರಿದಂತೆ ಇತರರು ಹಾಜರಿದ್ದರು.