ಬೆಂಗಳೂರು: ಸದ್ಯಕ್ಕೆ ರಾಜಕೀಯದಲ್ಲಿ ಆಸಕ್ತಿಯಿಲ್ಲ- ಅಭಿಷೇಕ್

ಬೆಂಗಳೂರು, ಮಾ.18: ಕೆಲವರು ಮಂಡ್ಯ ಜನರನ್ನು ನಮ್ಮಿಂದ ದೂರ ಇಡುವಂತಹ ಪ್ರಯತ್ನ ಮಾಡುತ್ತಿದ್ದು, ಅವರ ಪ್ರಯತ್ನ ಎಂದಿಗೂ ಫಲ ನೀಡದು ಎಂದು ದಿ.ಅಂಬರೀಷ್ ಪುತ್ರ ನಟ ಅಭಿಷೇಕ್ ಪರೋಕ್ಷವಾಗಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಕಾರಣದಲ್ಲಿ ಸದ್ಯಕ್ಕೆ ಆಸಕ್ತಿಯಿಲ್ಲ. ನಾನು ನಟ ಅಷ್ಟೆ. ನಟನಾಗಿ ಮುಂದುವರೆಯಲು ಇಚ್ಛಿಸುತ್ತೇನೆ. ನಟರನ್ನು ಜನರು ಬೆಳೆಸುತ್ತಾರೆಯೇ ಹೊರತು ಯಾವ ರಾಜಕಾರಣಿಯಲ್ಲ. ತಾಯಿಯ ಮೂಲಕ ರಾಜಕಾರಣಕ್ಕೆ ಪ್ರವೇಶ ಮಾಡುತ್ತೇನೆ ಎನ್ನುವುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಸುಮಲತಾ ಅಂಬರೀಷ್ ಅವರಿಗೆ ಸಲಹೆ ನೀಡುವಷ್ಟು ನಾನಿನ್ನೂ ಬೆಳೆದಿಲ್ಲ. ಆದರೆ ಸ್ನೇಹಿತ ನಿಖಿಲ್ ಗೆ ಬುದ್ಧಿಮಾತು ಹೇಳುವಷ್ಟು ಬೆಳೆದಿದ್ದೇನೆ ಎನ್ನುವ ಮೂಲಕ ಜೆಡಿಎಸ್ ನಾಯಕರನ್ನು ಅವರು ಕುಟುಕಿದರು.