ಬೆಂಗಳೂರು, ಮಾ 19: ಸ್ಯಾಂಡಲ್ ವುಡ್ ನ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ಖಾಸಗಿ ಹೋಟೆಲ್ ನ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ ಕೇಳಿಬಂದಿದೆ. ಆದರೆ ತಾವು ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ, ಗಾಳಿಸುದ್ದಿಯನ್ನು ನಂಬಬೇಡಿ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ನಟಿ ಪೂಜಾ ಗಾಂಧಿ ಈ ಹಿಂದೆ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯವಿದ್ದು, ಬಿಲ್ ಕಟ್ಟದೆ ಸತಾಯಿಸುತ್ತಿದ್ದಾರೆ ಗಂಭೀರ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಮೂಲಗಳ ಪ್ರಕಾರ ಮಾರ್ಚ್ 11ರಂದೇ ಪೂಜಾ ಗಾಂಧಿ ವಿರುದ್ದ ದೂರು ದಾಖಲಾಗಿದ್ದು, ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯವಿದ್ದ ನಟಿ ಪೂಜಾ ಗಾಂಧಿ ವಿರುದ್ಧ ಬರೋಬ್ಬರಿ 3 ಲಕ್ಷದ 53 ಸಾವಿರ ಲಕ್ಷ ಬಿಲ್ ಕಟ್ಟದೆ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಂಚನೆ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಹೆಸರೂ ಕೂಡ ಕೇಳಿ ಬಂದಿದ್ದು, ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್ ಪಿ. ಮೆಣಸಿನಕಾಯಿ ಒಂದು ವರ್ಷ ದಿ ಲಲಿತ್ ಅಶೋಕದಲ್ಲೇ ವಾಸ್ತವ್ಯ ಹೂಡಿದ್ದು, ಅಲ್ಲಿಂದ ಸೇವೆಯನ್ನು ಪಡೆದುಕೊಂಡಿದ್ದಾರೆ. ಕಳೆದ 2016 ರ ಏಪ್ರಿಲ್‍ನಿಂದ ಮಾರ್ಚ್ 2017 ರವರೆಗೆ ಬರೋಬ್ಬರಿ 1 ವರ್ಷ ಕೊಠಡಿ ಬುಕ್ ಮಾಡಿದ್ದರು. ಇದಕ್ಕಾಗಿ ಇವರು ಹೋಟೆಲ್ಗೆ 26.22 ಲಕ್ಷ ಹಣ ಪಾವತಿಸಬೇಕಿತ್ತು. ಅದರಲ್ಲಿ ಕೇವಲ 22.83 ಲಕ್ಷ ಪಾವತಿಸಲಾಗಿದ್ದು, 3.53 ರೂ. ಬಾಕಿ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಿಲ್ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಪೂಜಾ ಗಾಂಧಿ, ತಾವು ಚಿತ್ರೀಕರಣವೊಂದರ ಸಂದರ್ಭದಲ್ಲಿ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದು ನಿಜ. ಆದರೆ ಬಾಕಿ ಉಳಿಸಿಕೊಂಡಿಲ್ಲ. ಈ ಸಂಬಂಧ ಮಂಗಳವಾರ ಪೊಲೀಸ್ ಠಾಣೆ ಗೆ ತೆರಳಿ ಯಾವುದೇ ಹಣ ಪಾವತಿಸಿಲ್ಲ. ಮೂರನೇ ವ್ಯಕ್ತಿಯೊಬ್ಬರ ಮಾಡಿರುವ ಆರೋಪಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.