ಲೋಕದರ್ಶನ ವರದಿ
ಮುದಗಲ್ಲ 24: ಸರಕಾರದ ವಿವಿಧ ಯೋಜನಗಳ ಸೌಲಭ್ಯಪಡೆಯುವ ಮೂಲಕ ಈ ಭಾಗದ ಮಕ್ಕಳು ಶಿಕ್ಷಣ ಕ್ಷೇತ್ರದ ಉತ್ತಮ ಸಾಧನೆಮಾಡಬೇಕು ಎಂದು ಲಿಂಗಸುಗೂರ ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು
ಪಟ್ಟಣ ಸಮೀಪದ ಬನ್ನಿಗೋಳ ಗ್ರಾಮದ ಸರಕಾರಿ ಪ್ರೌಢಶಾಲೆ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಬೆಳ್ಳಿಗೆ ಕೆನೆಭರಿತ ಹಾಲು ನೀಡುವ ಮೂಲಕ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಶೂ ಸಾಕ್ಸ್, ಸಮವಸ್ತ್ರ ವಿತರಣೆ, ಸೈಕಲ್, ಶಿಷ್ಯವೇತ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ ಆದರೆ ಪರೀಕ್ಷೆಯಲ್ಲಿ, ನೌಕರಿ ಪಡೆಯುವದರಲ್ಲಿ ಮಾತ್ರ ನಮ್ಮ ಜಿಲ್ಲೆಯ ಹಿಂದೂಳಿದೆಎಂದು ಮಾರ್ಮಿಕವಾಗಿ ಹೇಳಿದರು.
ಲಿಂಗಸುಗೂರ ಪಿಕಾರ್ಡ ಬ್ಯಾಂಕ ಅಧ್ಯಕ್ಷ ನಾಗನಗೌಡ ತುರಡಗಿ. ಮುದಗಲ್ ಬ್ಲಾಕ್ ಅಧ್ಯಕ್ಷ ದಾವೂದ್ ಸಾಬ, ಎಪಿಎಂಸಿ ನಿರ್ದೇ ಶಕ ಗ್ಯಾನನಗೌಡ ಪೊಲೀಸ ಪಾಟೀಲ್, ಡಾ. ಅಯ್ಯಪ್ಪ ಬನ್ನಿಗೋಳ, ಪುರಸಭೆ ಸದಸ್ಯ ಎಸ್.ಆರ್.ರಸೂಲ್, ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್ಲ, ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ ತುರಡಗಿ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ್, ಹನುಮೇಶ ಹೂನೂರು. ಮೈಬುಬಸಾಬ ಹೂನೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶೀಲಾ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳು ವಿರೂಪಾಕ್ಷಯ್ಯ ಕಾಟಾಪೂರಮಠ ಹಾಜರಿದ್ದರು.