ಬೆಳಗಾವಿ 21: ಇಂದಿಗೂ ಬೇಂದ್ರೆಯವರ ಭಾವಗೀತೆಗಳು ಎಲ್ಲರ ಬಾಯಲ್ಲಿ ನಲಿದಾಡುತ್ತಲಿವೆ. ಬೇಂದ್ರೆಯವರದ್ದು ಶಾಶ್ವತ ಸಾಹಿತ್ಯ. ಈ ವರಕವಿಯ ಸಾಹಿತ್ಯ ಹಾಗೂ ಜೀವನದಾರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಅವಶ್ಯಕತೆಯಿದೆ. ಆ ಕಾರ್ಯವನ್ನು ಮಾಡುತ್ತಿರುವ ಈ ಸಂಘಟನೆ ಕಾರ್ಯ ಶ್ಲಾಘನೀಯ ಎಂದು ಹಾಸ್ಯಕೂಟ ಕಲಾವಿದ, ನಿವೃತ್ತ ಶಿಕ್ಷಕ ಜಿ. ಎಸ್. ಸೋನಾರ ಇಂದಿಲ್ಲಿ ಹೇಳಿದರು.
ನಗರದ ಎಸ್.ಕೆ.ಇ. ಸೊಸಾಯಿಟಿಯ ಸಂಚಲಿತ ಠಳಕವಾಡಿ ಪ್ರೌಢಶಾಲೆಯ ವರಕವಿ ಡಾ. ದ.ರಾ. ಬೇಂದ್ರೆ ಕನ್ನಡ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. ವರಕವಿ ಬೇಂದ್ರೆಯವರ ಜೀವನದ ಸಂಕ್ಷಿಪ್ತ ಪರಿಚಯವನ್ನು ಮಕ್ಕಳಿಗೆ ಸೋನಾರ ಅವರು ಮಾಡಿಕೊಟ್ಟರು.
ದ.ರಾ. ಬೇಂದ್ರೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ, ಲೇಖಕ ಗುಂಡೇನಟ್ಟಿ ಮಧುಕರ ಠಳಕವಾಡಿ ಮರಾಠಿ ಪ್ರೌಢಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಕನ್ನಡ ವರಕವಿ ಬೇಂದ್ರೆ ಕುರಿತಾದ ಉಪನ್ಯಾಸ ಏರ್ಪಡಿಸಿ ಕವಿ ಪರಿಚಯ ಮಾಡಿಕೊಡುತ್ತಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಇದು ಭಾಷಾ ಸಾಮರಸ್ಯವನ್ನು ತೋರಿಸುತ್ತದೆ ಎಂದು ಹೇಳಿದ ಅವರು ಮಕ್ಕಳು ಕೇವಲ ಡಾಕ್ಟರ್ ಇಂಜನೀಯರ ಮೋಹಕ್ಕೆ ಬೀಳದೇ ತಮ್ಮಲ್ಲಿರುವ ಪ್ರತಿಭೆಗಳನ್ನು ಕಂಡುಕೊಂಡು ಅವುಗಳನ್ನು ಬೆಳೆಸಿಕೊಳ್ಳಬೇಕು ಅದರಂತೆ ಪಾಲಕರು ಹಾಗೂ ಶಿಕ್ಷಕರ ಪ್ರೋತ್ಸಾಹವೂ ಇದಕ್ಕೆ ಅತ್ಯಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಲಾವಿದ ಜಿ.ಎಸ್. ಸೋನಾರ ಹಾಗೂ ಲೇಖಕ ಗುಂಡೇನಟ್ಟಿ ಮಧುಕರ ಅವರನ್ನು ಶಾಲು ಹೊದಿಸಿ ಫಲಪುಷ್ಫ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ. ವಾಯ್ ಪಾಟೀಲ ವಹಿಸಿಕೊಂಡಿದ್ದರು.
ಈಶಸ್ತವನ ಹಾಗೂ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಘದ ಮಾರ್ಗದರ್ಶಕ ಸಂಜೀವ ಎಸ್. ಕೋಷ್ಠಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ಅಧ್ಯಕ್ಷೆ ಪೂನಮ ಧಾಮಣೇಕರ ಉಪಾಧ್ಯಕ್ಷೆ ಪ್ರೀತಿ ಹೊಸೂರಕರ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಕಾರ್ಯದಶರ್ಿ ವಿನಾಯಕ ಅವಘಾನ ಮಾಡಿದರು. ಬಿ. ಆರ್. ಪಾಟೀಲ ವಂದಿಸಿದರು.