ಲೋಕದರ್ಶನ ವರದಿ
ಬಳ್ಳಾರಿ 21: ವಿದ್ಯಾಥರ್ಿ ಪರಿಷತ್ ಕಳೆದ 70 ವರ್ಷಗಳಿಂದ ವಿದ್ಯಾರ್ಥಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ವಿದ್ಯಾರ್ಥಿ ಸಂಘನೆಯಾಗಿ ಕೆಲಸ ಮಾಡುತ್ತಿದ್ದೆ. ವಿದ್ಯಾರ್ಥಿನಿಯರ ರಕ್ಷಣೆಗಾಗಿ ವರ್ಷವಿಡಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ.
ಎ.ಎಸ್.ಎಂ ಕಾಲೇಜಿನ ಕುಮಾರಿ ಹರಿಪ್ರಿಯ ವಿದ್ಯಾರ್ಥಿ ನಿಯು ಸಂಗನಕಲ್ಲಿನಿಂದ-ಬಳ್ಳಾರಿಗೆ ಓಡಾಡುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಆಕೆಗೆ ಹಿಂಸೆ ನೀಡುತ್ತಿದ್ದರು. ಎಂದು ಜುಲೈ 21 ರಂದು ನಗರದ ಮಹಿಳಾ ಪೋಲೀಸ್ ಠಾಣೆಯಲ್ಲಿ ಅವರ ತಂದೆ ಮುಖಾಂತರ ದೂರು ದಾಖಲಿಸಿದ್ದಾರೆ. ಆದರೆ ಪೋಲೀಸ್ರು ತಕ್ಷಣ ಸ್ಪಂದಿಸಿದ್ದರೆ ಒಂದು ಜೀವ ಉಳಿಸಬಹುದಿತ್ತು. ದೂರು ದಾಖಲಾದ ಮೇಲೆಯು ಯಾರು ಸ್ಪಂದಿಸಿಲ್ಲ. ಹಿಂಸೆ ತಾಳಲಾರದೆ ಆ ವಿದ್ಯಾರ್ಥಿನಿ ಆಗಸ್ಟ್ 7, 2019 ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಸಮಾಜದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ. ಮುಂದೆ ಒಂದು ದೂರು ದಾಖಲಿಸಿದರು ಯಾವ ಕ್ರಮವು ಕೈಗೊಂಡಿಲ್ಲ. ಅದಕಾರಣ ತಕ್ಷಣ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ಅ.ಭಾ.ವಿ.ಪ ಅಗ್ರಹಿಸಿದರು. ಸರ್ಕಾರ ವಿದ್ಯಾರ್ಥಿನಿಯರ ವಿಷಯದಲ್ಲಿ ತುಂಬ ಗಂಭೀರವಾಗಿ ರಕ್ಷಣೆ ಕೊಡುವಲ್ಲಿ ವಿಫಲವಾಗಿದೆ. ಆದಕಾರಣ ಗೃಹ ಸಚಿವರು ಮಧ್ಯ ಪ್ರವೇಶಿಸಿ ತಪ್ಪಿತಸ್ಥರಿಗೆ ಕಾನೂನು ಶಿಕ್ಷೆ ವಿಧಿಸಬೇಕೆಂದು ತಮ್ಮ ವಿನಂತಿ. ನಗರದ ಪ್ರತಿಷ್ಟಿತ ಮಹಿಳಾ ಕಾಲೇಜುಗಳಲ್ಲಿ ರಕ್ಷಣೆಗೊಸ್ಕರ ಎಷ್ಟು ಭಾರಿ ಪೋಲೀಸ್ ಇಲಾಖೆಗೆ ಮನವಿ ಕೊಟ್ಟರು ಕಸದ ದಬ್ಬಿಗೆ ಎಸದಂತಾಗಿದೆ.
ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ 3,000 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು. ಅಲ್ಲಿ ಯಾವ ಬೇಟಿ ನೂ ಬರುತ್ತಿಲ್ಲ. ವಿದ್ಯಾರ್ಥಿನಿಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಪೋಲೀಸ್ ಇಲಾಖೆಯವರು ಎಚ್ಚೆತ್ತಿಕೊಳ್ಳಬೇಕು