ಜೋತ್ಸನಾ ಪಾಟೀಲ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ..!

ಜೋತ್ಸನಾ ಪಾಟೀಲ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ..! Jotsana Patil secures third position for the state in SSLC..!

ಲೋಕದರ್ಶನ ವರದಿ 

ಕಾಗವಾಡ 28: ತಾಲೂಕಿನ ಜುಗೂಳ ಗ್ರಾಮದ ಕೆಎಸ್‌ಎಸ್ ಪ್ರೌಢಶಾಲೆಯ ನಿವೃತ್ತ್‌ ಮುಖ್ಯೋದ್ಯಾಪಕ ಎಸ್‌.ಎಸ್‌. ಪಾಟೀಲ ಅವರ ಮೊಮ್ಮಗಳಾದ ಜೋತ್ಸನಾ ಭಾಲಚಂದ್ರ ಪಾಟೀಲ ಇವಳು ಇತ್ತಿಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾಳೆ. 

ಜೋತ್ಸನಾ ಇವಳು ಮುದ್ದೇಬಿಹಾಳ ತಾಲೂಕಿನ ನಾಗರಕಟ್ಟಾದ ಆಕ್ಸಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು, ಜುಗೂಳ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾಳೆ. 

ಅವಳ ಈ ಸಾಧನೆಗೆ ಜುಗೂಳ ಗ್ರಾಮದ ಗಣ್ಯರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.