ಲೋಕದರ್ಶನ ವರದಿ
ಬಳ್ಳಾರಿ 29: ಶ್ರೀ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವವು ಮ.03ರಂದು ಸಂಜೆ 5.30ಕ್ಕೆ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಕನಕದುರ್ಗಮ್ಮ ದೇವಸ್ಥಾದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಹೆಚ್.ಪ್ರಕಾಶರಾವ್ ತಿಳಿಸಿದ್ದಾರೆ.
ಮಾ.02ರಂದು ಸಂಜೆ ಕುಂಬಾರ ಸಮಾಜದಿಂದ ಸಿಡಿಬಂಡಿಗೆ ಪ್ರಥಮ ಕುಂಭಪೂಜೆ, ಸಜ್ಜನ ಗಾಣಿಗ ಸಮಾಜದ ಬಾಂದವರುಗಳಿಂದ ಸಿಡಿಬಂಡಿಗೆ ಪೂಜೆಯನ್ನು ನಿರ್ವಹಿಸಿ 06 ಎತ್ತುಗಳನ್ನು ಸಿಡಿಬಂಡಿಗೆ ಕಟ್ಟಿ ಗಾಣಿಗರ ಬೀದಿಯಿಂದ ಕೌಲ್ ಬಜಾರ್ ಮುಖ್ಯ ರಸ್ತೆಯ ಮುಖಾಂತರವಾಗಿ, ಸಿರುಗುಪ್ಪ ರಸ್ತೆ, ಎಸ್.ಪಿ.ವೃತ್ತ ಮುಖಾಂತರವಾಗಿ ಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಬಂದು ಸೇರುತ್ತದೆ.
ಬೆಂಗಳೂರು ರಸ್ತೆ ಶ್ರೀ ಚಿನ್ನದುರ್ಗಮ್ಮ ದೇವಸ್ಥಾನದಿಂದ ಕುಂಬವನ್ನು ತರಲಾಗುವುದು, ಮಾ.03ರಂದು 06 ಎತ್ತುಗಳು ಶ್ರೀ ಕನಕದುರ್ಗಮ್ಮ ದೇವಿಯ ದರ್ಶನ ಪಡೆದು, ಶ್ರೀಪೊಲೇರಮ್ಮ ದೇವಿಯ ದರ್ಶನ ಪಡೆದುಕೊಂಡು ಸಿಡಿ ಬಂಡಿಯನ್ನು ಸಿದ್ದಪಡಿಸಿ ಸಂಜೆ 5.30ಕ್ಕೆ ಮೂರು ಪ್ರದಕ್ಷಿಣೆ ಹಾಕುವ ಮೂಲಕವಾಗಿ ಸಿಡಿ ಬಂಡಿ ರಥೋತ್ಸವ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಮಾ.03ರಂದು ಕುಂಬಾರ ಸಮಾಜ ವತಿಯಿಂದ ಮದ್ಯಾಹ್ನ ಕುಂಬಾರ ಓಣಿಯಲ್ಲಿ ಅನ್ನದಾಸೋಹ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ.
ಸಿಡಿ ಬಂಡಿ ರಥೋತ್ಸವ ಜರುಗಿಸಲು ಅಗತ್ಯ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ಬಸ್ಸಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ, ಭದ್ರತೆಯ ವ್ಯವಸ್ಥೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಬಳ್ಳಾರಿ ಮಹಾನಗರ ಪಾಲಿಕೆ, ಹಿಂದೂ ಧಾಮರ್ಿಕ ದತ್ತಿ ಇಲಾಖೆ, ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ಕೈಕೊಂಡಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸಿಡಿಬಂಡಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ತಿಳಿಸಿದ್ದಾರೆ.