ಲೋಕದರ್ಶನ ವರದಿ
ಬಳ್ಳಾರಿ 18: ಚರಿತ್ರೆ ರಚನೆಯಲ್ಲಿ ತಾರತಮ್ಯ ನೀತಿ ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ದೂರ ಇಟ್ಟಾಗ ಮಾತ್ರ ನಿಜವಾದ ಇತಿಹಾಸವನ್ನು ಅರಿತುಕೊಳ್ಳಲು ಸಾಧ್ಯ. ಯಾವುದೇ ಒಂದು ಘಟನೆಯನ್ನು ಇತಿಹಾಸದಲ್ಲಿ ದಾಖಲಿಸುವಾಗ ಅದನ್ನು ವೈಭವೀಕರಿಸುವ ಮತ್ತು ತುಚ್ಛೀಕರಿಸುವುದು ಸರಿಯಾದ ಕ್ರಮವಲ್ಲ ಎಂದು ಮೈಸೂರಿನ ಇತಿಹಾಸ ಚಿಂತಕರಾದ ಪ್ರೊ. ನಂಜರಾಜ ಅರಸ್ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಒನಕೆ ಓಬವ್ವ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ಆಧುನಿಕ ಪೂರ್ವ ಸಂದರ್ಭ: ಆಡಳಿತ ನಿರ್ವಹಿಸಿದ ರಾಣಿಯರು ಎಂಬ ವಿಚಾರ ಸಂಕಿರಣದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಇತಿಹಾಸವನ್ನು ಹಲವರು ಹಲವು ದೃಷ್ಟಿಕೋನ, ಮನೋಭಾವ, ಚಿಂತನೆಗೆ ತಕ್ಕಂತೆ ಪ್ರಸ್ತುತಪಡಿಸುತ್ತಾರೆ. ಯಾವುದೇ ಅಂಶದ ಬಗ್ಗೆ ನಿರ್ಣಯ ಕೊಡುವಾಗ ಕ್ರಾಸ್ ಚೆಕ್ ಮಾಡುವುದು ಉತ್ತಮ. ಇತಿಹಾಸ ಮತ್ತು ಪುರಾಣವನ್ನು ಓದಿ, ಆದರೆ ಸ್ವಂತ ನಿಧರ್ಾರ ಮಾಡಿ. ಪದವಿಗಳನ್ನು ನಾಮಕಾವಸ್ಥೆಗೆ ಪಡೆಯದೇ ಜ್ಞಾನ ವೃದ್ಧಿಸಿಕೊಳ್ಳಿ. ವಿಶಾಲ ಅಧ್ಯಯನ, ಸ್ವತಂತ್ರ ಚಿಂತನೆ ಮೂಲಕ ನಿಮ್ಮತನ, ನಿಮ್ಮ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಒನಕೆ ಓಬವ್ವ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ಶೈಲಜ ಇಂ. ಹಿರೇಮಠ ಅವರು ವಂದನಾರ್ಪಣೆ ಮಾಡಿದರು. ಸಂಶೋಧನಾ ವಿದ್ಯಾಥರ್ಿಯಾದ ಹುಲುಗಪ್ಪ ಅವರು ನಿರೂಪಿಸಿದರು. ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಸ.ಚಿ. ರಮೇಶ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾಥರ್ಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.