ಲೋಕದರ್ಶನ ವರದಿ
ಬಳ್ಳಾರಿ 25: ಆಧುನಿಕ ಮಾಧ್ಯಮಗಳಿಂದ ರಂಗಭೂಮಿಯು ಅಳವಿನಿಂಚಿಗೆ ತಲುಪಿದೆ. ಪ್ರಾಚೀನ ಕಾಲದಿಂದ ಪರಂಪರೆಯಾಗಿ ಉಳಿದುಕೊಂಡು ಬಂದಿರುವ ರಂಗಭೂಮಿಯು ಜೀವಂತ ಕಲೆಯಾಗಿದೆ. ಈ ಕಲೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ವಕೀಲರು ಹಾಗೂ ಬಳ್ಳಾರಿಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎರ್ರೇಗೌಡ ಸಲಹೆ ನೀಡಿದರು.
ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಶ್ರೀ ಎರ್ರಿತಾತನವರ ಮಠದ ಆವರಣದಲ್ಲಿ ಹಂದಿಹಾಳ್ನ ವಿಶ್ವಂ ಒಂದೇ ತತ್ವಪದ ಕಲಾ ಸಂಘ ಹಾಗೂ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಶಿವರಾತ್ರಿ ಕಾರ್ಯಕ್ರಮದ ಅಂಗವಾಗಿ ನಡೆದ ಜಯಲಕ್ಷ್ಮಿ ಕಲಾ ತಂಡದ ಏಕಲವ್ಯ ಪೌರಾಣಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ರಂಗಭೂಮಿಯು ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಜೀವಂತವಾಗಿದ್ದು, ಅದರೊಂದಿಗೆ ಆಧುನಿಕ ಹವ್ಯಾಸಿ ರಂಗಭೂಮಿಯು ಸಹ ಬಳಕೆಯಲ್ಲಿದೆ. ಇದರಿಂದ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಇಂತಹ ನಾಟಕಗಳು ಸಹಕಾರಿಯಾಗಿವೆ. ಆದ್ದರಿಂದ ನಾಟಕ ಕಲೆಯನ್ನು ರಕ್ಷಿಸಬೇಕೆಂದರು.
ಅಧ್ಯಕ್ಷತೆಯನ್ನು ಕೊಳಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಹುಲಿಯಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಳಗಲ್ಲು ತಾ.ಪಂ. ಸದಸ್ಯ ಯು.ಭೋಗರಾಜ, ಜಿ.ಪಂ.ಸದಸ್ಯ ಎರ್ರಿಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಜೆ.ಹನುಮಣ್ಣ, ಬಳ್ಳಾರಿ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಸದಸ್ಯ ಯು.ಎರ್ರಿಸ್ವಾಮಿ, ಜಿಲ್ಲಾ ಕುರುಬರ ಸಂಘದ ಎ. ಮಲ್ಲೇಶ್, ಹಾಜರಿದ್ದರು.
ಪಾತ್ರಧಾರಿಗಳಾಗಿ ಅವೈ(ತಾಯಿ) ಜಯಶ್ರೀಪಾಟೀಲ್, ಏಕಲವ್ಯನಾಗಿ ಹಂದಿಹಾಳ್ ಪರಶುರಾಮ, ಅಶ್ವತ್ಥಾಮನಾಗಿ ಕೊಳಗಲ್ಲಿನ ಡಿ.ಗಂಗಾಧರ, ದ್ರೋಣಾಚಾರ್ಯನಾಗಿ ಎ.ಎಂ.ಪಿ.ವೀರೇಶಸ್ವಾಮಿ, ಅಜರ್ುನನಾಗಿ ಗೂಳ್ಯಂನ ಶೂಲಪಾಣಿ, ನಕುಲನಾಗಿ ಕಲ್ಲುಕಂಬ ಕೆ.ಗಾದಿಲಿಂಗಪ್ಪ ಅವರು ಅಭಿನಯಿಸಿದರು. ದೊಡ್ಡಬಸವ ಗವಾಯಿಗಳು ಸಂಗೀತವನ್ನು ಪ್ರಸ್ತುತಪಡಿಸಿದರು.