ಬಳ್ಳಾರಿ: 'ಸಿ' ವೃಂದದ ಸಿಬ್ಬಂದಿವರ್ಗದರಿಗೆ ಸುಸ್ಥಿರ ಅಬಿವೃದ್ದಿ ಕಾರ್ಯಗಾರ

ಲೋಕದರ್ಶನ ವರದಿ

ಬಳ್ಳಾರಿ 18: ಆಡಳಿತ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಆಡಳಿತ ಸಹ0ೋಗದೊಂದಿಗೆ ಆಡಳಿತ ತರಬೇತಿ0ು ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲೆ0ು ವಿವಿಧ ಇಲಾಖೆಗಳ "ಸಿ" ವೃಂದದ ಸಿಬ್ಬಂದಿವರ್ಗದವರಿಗೆ ಸುಸ್ಥಿರ ಅಬಿವೃದ್ದಿ ಗುರಿಗಳು ಕನರ್ಾಟಕ ಕೇಂದ್ರ ತರಬೇತಿ0ುನ್ನು ಬಳ್ಳಾರಿ ಜಿಲ್ಲಾ ಮಟ್ಟದ, ತಾಲೂಕು ಮಟ್ಟದಲ್ಲಿ ಮತ್ತು ಬಳ್ಳಾರಿ ಜಿಲ್ಲೆ0ು ಎಲ್ಲಾ ನಗರ ಸ್ಥಳೀ0ು ಸಂಸ್ಥೆಗಳ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ0ುನ್ನು ಆ0ೋಜಿಸುವ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲಾ ತರಬೇತಿ ಸಂಸ್ಥೆ0ುಲ್ಲಿ ಬಳ್ಳಾರಿ ತಾಲೂಕು ಮಟ್ಟದ ಸುಸ್ಥಿರ ಅಭಿವೃದ್ದಿ ತರಬೇತಿ0ುನ್ನು  ವಾಗೀಶ್, ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿಗಳು, ಬಳ್ಳಾರಿ ಇವರ ಅಮೃತಹಸ್ತದಿಂದ ಉದ್ಘಾಟನೆ ಮಾಡಲಾಯಿತು. 

ಸದರಿ ತರಬೇತಿ ಬಗ್ಗೆ ಮಾನ್ಯರು ಈ ಸುಸ್ಥಿರ ಅಭಿವೃದ್ದಿ ಗುರಿಗಳು 2020-30ರ ಒಳಗಡೆ ಈ 17 ಗುರಿಗಳನ್ನು ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ತರುವ ಕೇಂದ್ರ ಸರ್ಕಾರದಿಂದ ಮಾನ್ಯವಾಗಿರುತ್ತದೆ. ಈ ಗುರಿಗಳಲ್ಲಿ ಸದ್ಯಕ್ಕೆ 05 ಗುರಿಗಳು ಅಂದರೆ 1) ಹಸಿವು ಮುಕ್ತ 2) ಉತ್ತಮ ಆರೋಗ್ಯ ಮತ್ತು ಜೀವನ 3) ಗುಣಾತ್ಮಕ ಶಿಕ್ಷಣ 4) ಲಿಂಗ ಸಮಾನತೆ ಮತ್ತು 5) ಸ್ವಚ್ಚ ನೀರು ಮತ್ತು ನೈರ್ಮಲ್ಯ ಬಗ್ಗೆ ತರಬೇತಿ0ುನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಾದ ಎಂ. ಲೋಕೇಶ್, ಶ್ರೀಮತಿ ಮಂಜುಳ ಮಾಳ್ಗಿ ಮತ್ತು ಶ್ರೀಮತಿ ವನಜ. ಟಿ. ಬೋಧಕರು, ಜಿಲ್ಲಾ ತರಬೇತಿ ಸಂಸ್ಥೆ, ಬಳ್ಳಾರಿ ಇವರಿಂದ ತರಬೇತಿ ವಿಶ್ಲೇಷಣೆ ಮಾಡಲಾಯಿತು. ಸದರಿ ತರಬೇತಿ0ುಲ್ಲಿ ಪ್ರಾರ್ಯರಾದ ಎಸ್.ಸುರೇಶ್ ಬಾಬು, ಶ್ರೀಧರ, ವನಜ.ಟ. ಇನ್ನುಳಿದ ಸಿಬ್ಬಂದಿ ಮತ್ತು ಆಡಳಿತ ತರಬೇತಿ ಸಂಸ್ಥೆ, ಮೈಸೂರು ರಿಂದ ಡಾ. ವೆಂಕಟೇಶ್, ಪ್ರಭು ರವರು ಉಪಸ್ಥಿತರಿದ್ದರು. ಸದರಿ ತರಬೇತಿಗೆ ಗ್ರಾಮೀಣಾ ಅಭಿವೃದ್ದಿ ಮತ್ತು ಪಂಚಾ0ುತ್ ರಾಜ್ ಇಲಾಖೆ ಸಿಬ್ಬಂದಿ ಹಾಗೂ ಇನ್ನಿತರೆ ಸಿಬ್ಬಂದಿಗಳು ಹಾಜರಿದ್ದರು,

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಹಾಗೂ ತಾಲೂಕು ಪಂಚಾಯಿತಿಯ ರೋಣ, ಪುರಸಭೆ ಗಜೇಂದ್ರಗಡ, ಕರ್ನಾಟಕ ರಾಜ್ಯ ಸಂಘಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವಜನ ಮೇಳವನ್ನು 2019-20 ದಿ,14-2-2020 ರಿಂದ 16-2-2020 ಮೂರು ದಿನಗಳ ಕಾಲ ವಿವಿಧ ಜನಪದ ಸ್ಪರ್ದೇಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ದೇಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹಿಳಾ ವಿಭಾಗದ ಭಜನಾ ಗಾಯನ ಸ್ಪರ್ದೇಯಲ್ಲಿ ಜಿ. ಮಂಜಮ್ಮ ಅವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಪುರುಷರ ವಿಭಾಗದ ಜಾನಪದ ಗೀತೆಗಳ ಸ್ಪರ್ದೇಯಲ್ಲಿ ದಳವಾಯಿ ಅಂಬಣ್ಣ ಅವರ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ ಹಾಗೂ ಪುರುಷರ ವಿಭಾಗದ ಭಜನಾ ಗಾಯನ ಸ್ಪರ್ದೇಯಲ್ಲಿ ವೀರೇಶ ದಳವಾಯಿ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರನ್ನು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಸ.ಚಿ. ರಮೇಶ, ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ, ಲಲಿತಕಲಾ ನಿಕಾಯದ ಡೀನರಾದ ಡಾ.ಕೆ.ರವೀಂದ್ರನಾಥ, ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಗೋವಿಂದ, ದೃಶ್ಯಕಲಾ ವಿಭಾಗದ ಅಧ್ಯಾಪಕರಾದ ಡಾ. ಹೆಚ್.ಎನ್. ಕೃಷ್ಣೇಗೌಡ, ಸಂಗೀತ ವಿಭಾಗದ ಅಧ್ಯಾಪಕರು ಹಾಗೂ ಆಡಳಿತ ಸಿಬ್ಬಂದಿಗಳು ವಿದ್ಯಾಥರ್ಿಗಳನ್ನು ಅಭಿನಂದಿಸಿದರು.