ಲೋಕದರ್ಶನ ವರದಿ
ಬಳ್ಳಾರಿ 15: ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಫಲಪೂಜಾ ಪ್ರಯುಕ್ತ ಕಡ್ಡಿರಾಂಪುರದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದ ಇವರಿಂದ 22ನೇ ವರ್ಷದ ಭಕ್ತಿಭಾವನಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಾನವನ ದುರಾಸೆಯಿಂದ ಮನಸ್ಸುಗಳು ಕಲುಶಿತಗೊಂಡಿದೆ. ಮತ್ತು ಪರಿಸರವೂ ಕಲುಶಿತಗೊಳ್ಳುತ್ತಿದೆ. ನಾವು ದೇವರಿಗೆ ಏನನ್ನು ಕೊಡಬೇಕಾಗಿಲ್ಲ. ಭಕ್ತಿಯೊಂದಿದ್ದರೆ ಸಾಕು, ಆದೇವರು ಹಣ್ಣು ಹೂವು ಕೇಳುವುದಿಲ್ಲ, ಹಣ್ಣು ಹೂವನ್ನು ಕೊಡುವ ಗಿಡಮರವನ್ನು ದೇವರೇ ಕೊಟ್ಟಿರುವುದು ಅವನ್ನು ನಾವು ರಕ್ಷಿಸಿಕೊಂರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಮನಸ್ಸು ಶುದ್ದವಾಗಿ ಶಾಂತವಾಗಿರಲು ಆಧ್ಯಾತ್ಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ನಮ್ಮ ಮನಸ್ಸು ಶುದ್ದವಾಗಿರುತ್ತದೆ. ನಮ್ಮ ದೇಹ ಶುದ್ದವಾಗಿರಬೇಕಾದರೆ ಆ ದೇವರು ಕರುಣಿಸಿದ ಜಲಮೂಲವನ್ನು, ಗಿಡಮರಗಳನ್ನು, ವಾಯುಮಾಲಿನ್ಯ ಮಾಡದಂತೆ ಕಾಪಾಡಿಕೊಂಡರೆ ನಮ್ಮ ದೇಹ ಮನಸ್ಸು ಚೆನ್ನಾಗಿರುತ್ತದೆ. ಇಡೀ ಭೂಮಿ ಜೀವ ಸಂಕುಲವು ಸುಗಮವಾಗಿ ಸಾಗುತ್ತದೆ ಎಂದರು. ಎಲ್ಲರೂ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಹಂಪಿ ವಿದ್ಯಾರಣ್ಯ ಪೀಠಾಧಿಪತಿ ಶಂಕರಾಚಾರ್ಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಯಿಸಿದ್ದರು, ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿ ಎಂ.ಹೆಚ್.ಪ್ರಕಾಶ್, ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಆನೇಗುಂದಿ ರಾಜವಂಸ್ಥ ಕೃಷ್ಣದೇವರಾಯ ಆಗಮಿಸಿದ್ದರು, ಕಲಾವೃಂದದ ಅಂಗಡಿ ವಾಮದೇವ ಪುರೋಹಿತ ಚಿಕ್ಕಮೋಹನ್ ಭಟ್, ಉಪಸ್ಥಿತರಿದ್ದರು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೊಸಪೇಟೆಯ ವಿಜಯಕುಮಾರ್, ಕನ್ನಡ ವಿ.ವಿ.ಸಂಗೀತ ವಿಭಾಗದ ಮಲ್ಲಿಕಾಜರ್ುನ ಬಡಿಗೇರ್ ತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಅಂಜಲಿ ಭರತನಾಟ್ಯ ಕಲಾಕೇಂದ್ರ ಹೊಸಪೇಟೆಯ ವಿದ್ಯಾಥರ್ಿಗಳಿಂದ ಭರತನಾಟ್ಯ ಹಂಪಿಯ ಅಭಿನವ ಭರತನಾಟ್ಯ ಕಲಾತಂಡದ ವತಿಯಿಂದ ಜಾನಪದ ನೃತ್ಯ, ಅಂಗಡಿ ಸಮರ್ಥ, ನವ್ಯ ಅಂಗಡಿ, ಕುಮಾರಿ ರಕ್ಷಾ, ಇವರಿಂದ ಭಕ್ತಿಗೀತೆ ಯಲ್ಲಪ್ಪ ಬಂಡಾರ್ದಾರ್ ಇವರಿಂದ ಜಾನಪದ ಗೀತೆಗಳು ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದಲ್ಲಿ ದೊಡ್ಡ ಬಸಪ್ಪ ಅಂಗಡಿ, ಕೆ.ಪಂಪನಗೌಡ ನಿರೂಪಣೆ ಮಾಡಿದರು. ಕುಶಾಲ್ ಜಿಂಗಾಡೆ, ದೇವಸ್ಥಾನದ ಬಿ.ಜಿ.ಶ್ರೀನಿವಾಸ ಇತರರು ಉಪಸ್ಥಿತರಿದ್ದರು.