ಲೋಕದರ್ಶನ ವರದಿ
ಬಳ್ಳಾರಿ 06: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದ ಯುವಸ್ಪಂದನ ಕೇಂದ್ರ, ಎಪಿಡಿಯಾಮಿಲಾಜಿ ವಿಭಾಗ, ಜನ ಆರೋಗ್ಯ ಕೇಂದ್ರ, ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಇವರ ಸಂಯುಕ್ತಾಶ್ರಾಯದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುರುವಾರ ನಗರದ ಸರ್ಕಾರಿ ಮಾಜಿ-ಪುರಸಭೆ) ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಯುವಸ್ಪಂದನ ಕೇಂದ್ರದ ಆಪ್ತ ಸಮಲೋಚಕರಾದ ಸುಮಲತಾ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಯುವಜನತೆ ಅನುಭವಿಸುತ್ತಿರುವ ಸಮಸ್ಯೆಗಳು ತಲೆಮಾರುಗಳ ನಡುವಿನ ಹೊಂದಾಣಿಕೆ ವಿಷಯಗಳಾಗಿವೆ. ಸುರಕ್ಷತೆ, ಭಾವನಾತ್ಮಕ ಹತೋಟಿ, ಲಿಂಗ ಮತ್ತು ಲೈಂಗಿಕತೆ, ಆರೋಗ್ಯ, ಜೀವನ ಶೈಲಿ ಮತ್ತು ವರ್ತನೆ, ಶಿಕ್ಷಣ ಮತ್ತು ಪಠ್ಯ ವಿಷಯ, ವ್ಯಕ್ತಿತ್ವ ಬೆಳವಣಿಗೆ ನಿರ್ಧಾರ ತೆಗೆದುಕೊಳ್ಳುವಿಕೆ, ಉದ್ಯೋಗ ಈ ವಿಷಯಗಳಲ್ಲಿ ಗೊಂದಲ ಸೃಷ್ಠಿಯಾಗುತ್ತಿವೆ ಎಂದು ಹೇಳಿದ ಅವರು ಇಂತಹ ಗೊಂದಲಗಳಿಗೆ ಉಚಿತವಾಗಿ ಆಪ್ತ ಸಮಲೋಚನೆ ಹಾಗೂ ಮಾರ್ಗದರ್ಶನ ಮೂಲಕ ಸಲಹೆ, ಸೂಚನೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಬಿ.ಸುರೇಶ ಬಾಬು, ಸಕರ್ಾರಿ(ಮಾಜಿ-ಪುರಸಭೆ) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸದ್ರಾದ್ ಗೋಪಾಲ್, ಯುವಸ್ಪಂದನ ಕೇಂದ್ರದ ಆಪ್ತ ಸಮಲೋಚಕ ತಂಡದ ಸದಸ್ಯರು, ವಿದ್ಯಾಥರ್ಿಗಳು ಸೇರಿದಂತೆ ಇತರರು ಇದ್ದರು.