ಬಳ್ಳಾರಿ: ಒಂದೇ ಸೂರಿನಡಿ 30 ಕಂಪನಿಗಳ ವಜ್ರಾಭರಣ ಪ್ರದರ್ಶನ

ಲೋಕದರ್ಶನ ವರದಿ

ಬಳ್ಳಾರಿ 14: ನಗರದ ಕೊರ್ಟ ರಸ್ತೆಯಲ್ಲಿರುವ ಕಮ್ಮಾಭವನದಲ್ಲಿ ದಿ-ಜ್ಯೂವೆಲರಿ ಶೋ ಸಂಸ್ಥೆಯಿಂದ ಮೂರು ದಿನಗಳ ಕಾಲ 30 ಕಂಪನಿಗಳ 30 ಸಾವಿರ ವಿವದ ಭಗೆಯೆ ವಜ್ಯಾಭರಣಗಳ ಪ್ರದರ್ಶನ ಮತ್ತು ಮಾರಾಟ ಆರಂಭವಾಗಿದೆ. 

ಈ ಮೇಳವನ್ನು ಗೊಲ್ಡನ್ ಕ್ಲಿಪ್ಪರ್ ಸಂಸ್ಥೆಯ ಜಗದೀಶ್ ಬಿ.ಎಸ್ ಮತ್ತು ಹೇಮಲತಾ ಜಗದೀಶ್ ಅವರ ಆಯೋಜಿಸಿದ್ದು ಇದರ ಉದ್ಘಾಟನೆಯನ್ನು ರ್ಯಾಂಬೊ-2 ಚಿತ್ರದ ನಟಿ ಆಶಿಕಾ ರಂಗನಾಥ ಶುಕ್ರವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಆಶಿಕಾ  ರಂಗನಾಥ ಆಭರಣಗಳೆಂದರೆ ಮಹಿಳೆಯರಿಗೆ ಬಹು ಅಚ್ಚು-ಮೆಚ್ಚು ಅದು ನಂಬಿಕಸ್ತ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾದಂತ ಆಭರಣ ಮಳಿಗೆಗಳು ಭಾಗವಹಿಸಿದ್ದು ಮುಂಬರುವ ಮದುವೆ ಸಮಾರಂಭ ಹಾಗೂ ವರಮಾಹಲಕ್ಷ್ಮಿ ಹಬ್ಬಕ್ಕೆ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದರು. 

ಅಂತಯೇ ಬಳ್ಳರಿ ನಗರ ಮತ್ತು ಸುತ್ತ ಮುತ್ತಲಿನ ನಾಗರಿಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಅನುವುಮಾಡಿಕೊಟ್ಟಿದ್ದ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು. ವಿವಿದ ಕುಶಲಕಮರ್ಿಗಳು ತಯಾರಿಸುವಂತಹ ವಿಬಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ ಎಂದರು. 

ಈ ಚಿನ್ನಾಭರಣಗಳು ಆಲ್ ಮಾರ್ಕ ಹೊಂದಿರುತ್ತವೆ. ಜೊತೆಗೆ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿದ್ದು ಜಿ.ಐ.ಎ ಮತ್ತು ಐ.ಜಿ.ಐ ಪ್ರಾಮಾಣಿತ ವಜ್ರಾಭರಣಗಳು ದೊರೆಯುತ್ತವೆ. ಈ ಒಂದೇ ವೇದಿಕೆ ಅಡಿ ಮೊದಲಬಾರಿಗೆ ಬಳ್ಳಾರಿಯಲ್ಲಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು. ಗ್ರಾಹಕರ ಅಭಿರುಚಿ ಮತ್ತು ಅವರ ಬಜಟ್ಗೆ ಅನುಗುಣವಾಗಿ ಚಿನ್ನಾ ಮತ್ತು ವಜ್ರದ ಆಭರಣಗಳು ಇಲ್ಲಿ ದೊರೆಯಲಿವೆ. ಈ ಮೂರುದಿನದ ಆಭರಣ ಮೇಳಕ್ಕೆ ಜನರು ಸ್ಪಂಧಿಸಬೇಕು ಎಂದು ಕರೆ ನೀಡಿದರು.