ಲೋಕದರ್ಶನ ವರದಿ
ಬಳ್ಳಾರಿ 07: "ಮಹಿಳೆಯರ ಹಿಂಸೆ ಮುಕ್ತ ನೆಮ್ಮದಿಯ ಬದುಕಿಗಾಗಿ" ರಾಜ್ಯವ್ಯಾಪಿ ಮಹಿಳೆಯರಿಂದ ಡಿ.16 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮೀ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗೊಳಿಸಿ, ಕನಿಷ್ಟ ಜೀವನ ನಿರ್ವಹಣೆಗೆ 700 ರೂ ಕೊಡಬೇಕು. ಅಗತ್ಯ ಹಣವನ್ನು ಬಿಡುಗಡೆಗೊಳಿಸಬೇಕು. ಕೆಲಸದ ದಿನಗಳ ಮಿತಿಯನ್ನು ಕೈಬಿಡಬೇಕು. ಪಟ್ಟಣ ಮತ್ತು ನಗರವಾಸಿಗಳಿಗೋಸ್ಕರ ಖಾತ್ರಿ ಯೋಜನೆ ಜಾರಿಗೊಳಿಸಬೇಕು. ಮಹಿಳೆಯರನ್ನು ರಕ್ಷಿಸಿ, ಸ್ತ್ರೀ ಶಕ್ತಿ ಗುಂಪುಗಳಿಗೆ ಶೆ.4% ಬಡ್ಡಿದರದಲ್ಲಿ ಸಾಲಸೌಲಭ್ಯ, ಸಬ್ಸಿಡಿ, ತರಬೇತಿ, ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಖಾತ್ರಿ ಒದಗಿಸಲು ಒತ್ತಾಯಿಸಲಾಗುವುದು ಎಂದರು.
ಉದ್ಯೋಗ, ಶಿಕ್ಷಣ, ಮಹಿಳೆಯರ ಭದ್ರತೆಯ ಕುರಿತು ಕೇವಲ ಭಾಷಣ ಮಾಡುವುದನ್ನು ಬಿಟ್ಟು, ಅಭಿವೃದ್ಧಿ ಕೆಲಸ ಮಾಡಬೇಕು. ಮಹಿಳೆಯರು ಜೀವನರ ನಿರ್ವಹಣೆಗರ ಆಧಾರವಿಲ್ಲದೆ ಜೀವನ ಭದ್ರತೆ ಇಲ್ಲದೆ, ಬೇರೆ, ಬೇರೆ ವಿವಿಧ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾ.ವರ್ಮಾ ವರದಿ ಜಾರಿಗೊಳಿಸಬೇಕು. ಮಹಿಳೆಯರ ರಕ್ಷಣೆ ರಾಜಕೀಯ ಅಜೆಂಡಾ ಆಗಬೇಕಿದೆ. ಠಾಣೆ, ಮಹಿಳಾ ಆಯೋಗ, ಬಾಲ ಮಂದಿರದಲ್ಲಿ ಸಿಬ್ಬಂದಿಗಳಿಲ್ಲದೆ, ಪರಿಸ್ಥಿತಿ ಬಿಗಡಾಯಿಸಿದೆ ಎಂದು ದೂರಿದ ಅವರು, ಹೊಯ್ಸಳ ವಾಹನಗಳು ಇನ್ನೂ ಹೆಚ್ಚಾಗಿ ಬರಬೇಕಿದೆ ಎಂದರು.
ಜೀವ ಸಂಕುಲದ ಉಳಿವಿಗಾಗಿ ಜಲಮೂಲಗಳನ್ನು ರಕ್ಷಿಸಿ, ಖಾಸಗಿ ನೀರಿನ ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಚಂದ್ರಕುಮಾರಿ, ಕಾರ್ಯದಶರ್ಿ ಜಿ.ಸರೋಜ, ವಿನೋದ, ಅರುಣಾ ಇದ್ದರು.