ಲೋಕದರ್ಶನ ವರದಿ
ಬಳ್ಳಾರಿ 17: ನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಫಿಟ್ ಇಂಡಿಯಾ ಸಪ್ತಾಹ ಪ್ರಯುಕ್ತ 7ದಿವಸಗಳ ಕಾಲ ವಿದ್ಯಾರ್ಥಿನಿಯರಿಗೆ ಜಿಲ್ಲಾ ಪತಂಜಲಿ ಯೋಗ ಸಮಿತಿಯವರು ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಉದ್ಘಾಟಿಸಿದ ಜಿಲ್ಲಾ ಪತಂಜಲಿ ಸಂಯೋಜಕ ಇಸ್ವಿ ಪಂಪಾಪತಿ ಮಾತನಾಡಿ, ಸದೃಢ ದೇಹ, ಪರಿಶುದ್ದವಾದ ಮನಸ್ಸು, ಆತ್ಮಸೈರ್ಯಬೇಕೆಂದರೆ ಅದು ಯೋಗದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಪತಂಜಲಿ ಮಾಜಿ ಅಧ್ಯಕ್ಷ ಎಸ್.ಸಿ.ಪುರಾಣಿಕ್ ಅವರು ವಿದ್ಯಾರ್ಥಿನಿಯವರಿಗೆ ಭಜನೆ ಮತ್ತು ಹಾಸ್ಯಾಸನವನ್ನು ಮಾಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿ ಕುಮದಿನಿ ಮಾತನಾಡಿ, ನಿತ್ಯಾ ಯೋಗಾಭ್ಯಾಸ ಮಾಡಿ ಇದರ ಉಪಯೋಗವನ್ನು ಪಡೆದು ಒಳ್ಳೆಯ ದೇಶದ ಪ್ರಜೆಯಾಗಿ ಸಮೃದ್ಧ ಭಾರತ ನಿಮರ್ಿಸುವುದಕ್ಕೆ ಇದು ಒಂದು ಸುಂದರ ಅವಕಾಶ ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯರು ಲಾಭ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಕಣೆಕಲ್ ಯರ್ರಿಸ್ವಾಮಿ, ಕಿಸಾನ್ ಪಂಚಾಯತ್ ಅಧ್ಯಕ್ಷರಾದ ಚಂದ್ರಗೌಡ್ರು, ಯೋಗ ಶಿಕ್ಷಕಿಯಾದ ಕಲ್ಪನಾ, ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ 500 ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.