ಬಳ್ಳಾರಿ 13: ನಗರದಲ್ಲಿ ಈಗ 15 ರಿಂದ 20 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದೆ. 10 ದಿನದೊಳಗಾಗಿ ಒಮ್ಮೆಯಾದರು ನೀರು ಬಿಡದಿದ್ದರೇ ಬರುವ 15 ದಿನಗಳ ನಂತರ ಪಾಲಿಕೆಯ ಕಛೇರಿಯ ಆಯುಕ್ತರ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಯುವಸೇನೆ ಆಕ್ಷನ್ ಕ್ಲಬ್ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಅಲ್ಲಿಪುರ ಕೆರೆಯಲ್ಲಿ 5.5 ಮೀಟರ್ ನೀರು ಸಂಗ್ರವಾಗಿದ್ದರೂ ನಗರಕ್ಕೆ 15 ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರೆ. ಸಮರ್ಪಕವಾದ ರೀತಿಯಲ್ಲಿ ನೀರನ್ನು ಬಿಡದೇ ಅನೇಕ ಕಾರಣಗಳನ್ನು ಹೇಳಿ ಪಾಲಿಕೆಯ ಅಧಿಕಾರಿಗಳು ಕರ್ತವ್ಯಭ್ರಷ್ಟರಾಗಿದ್ದಾರೆ. ಜೊತೆಗೆ ಯಾವೊಬ್ಬ ಅಧಿಕಾರಿಯೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ದಿನದ 24 ತಾಸು ನೀರು ಸರಭರಾಜು ಮಾಡುವ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ಇದನ್ನು ಪೂರ್ಣಗೊಳಿಸಲು ಕ್ರಮಕೈಗೊಂಡಿಲ್ಲ. ಅಂತಯೇ ಅಮೃತ್ ಯೋಜನೆಯ ಅಂತಿಮ ಕಾಮಗಾರಿಯೂ ಅಲ್ಲಿಪುರದ ಬಳಿ ಸ್ಥಗಿತಗೊಂಡಿದೆ. ಈ ಬಗ್ಗೆ ಪ್ರಶ್ನಿಸಿ ಕೆಲಸ ಮಾಡಬೇಕಾದ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ತಮ್ಮ ಮನೆಗೆ ನೀರು ಬಂದಿಲ್ಲವೆಂದು ಮಾದ್ಯಮಗಳಲ್ಲಿ ಪ್ರಕಟಿಸುವಂತೆ ಮಾಡಿರುವುದು ಸರಿಯಲ್ಲ. ಅವರು ಅಲ್ಲಿಪುರ ಕೆರೆಗೆ ಭೇಟಿಕೊಟ್ಟು 5 ದಿನಕೊಮ್ಮೆ ನೀರು ಬಿಡಿಸಬೇಕೆಂದು ಹೇಳಿಕೆ ಕೊಟ್ಟು ಈಗ ಸುಮ್ಮನೆ ಕುಳಿತರುವ ಬದಲು ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲ ಅಧಿಕಾರಿಗಳ ಕಿವಿಹಿಂಡಿ ಕೆಲಸ ಮಾಡಿ ಜನತೆಗೆ ಸಮರ್ಪಕವಾದ ನೀರು ಸರಭರಾಜು ಮಾಡಲಿ ಎಂದು ಆಕ್ರೋಶ ವ್ಯೆಕ್ತ ಪಡಿಸಿದರು.
ಪಕ್ಷಕ್ಕೆ ಪಾಲಿಕೆ ಮತ್ತು ರಾಜ್ಯದಲ್ಲಿ ಅಧಿಕಾರವಿಲ್ಲವೆಂಬ ನೆಪದಿಂದ ಜನರಿಗೆ ಆಗಿರುವ ತೊಂದರೆಯನ್ನು ನೀವೆ ನಿಭಾಯಿಸಿಬೇಕು. ನೀರಿನ ವ್ಯೆವೆಸ್ಥೆಯನ್ನು 5 ದಿನಕ್ಕೊಮ್ಮೆ ಬಿಡಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇನ್ನು 10 ದಿನದಲ್ಲಿ ಈ ಕ್ರಮ ಕೈಗೊಳ್ಳದಿದ್ದರೇ ನಮ್ಮ ಸಂಘಟನೆಯೂ ಪಾಲಿಕೆಯ ಆಯುಕ್ತರ ಕಛೇರಿಯ ಮುಂದೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಬಳ್ಳಾರಿ ಶಾಸಕರು ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದು ಸಮಸ್ಯೆಯನ್ನು ಭಗೆಹರಿಸಲಿ ಎಂದು ವಿವರಿಸಿದರು