ಬಳ್ಳಾರಿ: ಇಂದು ವಿತರಕರ ಸ್ವಯಂಪ್ರೇರಿತ ಬಂದ್

ಲೋಕದರ್ಶನ ವರದಿ

ಬಳ್ಳಾರಿ 27: ನಗರದ ಪತ್ರಿಕಾಭವನದಲ್ಲಿ ವಿತರಕರ ಸಂಘದಿಂದ ವ್ಯಾಪಾರಿಗಳ ನಿಗಮಕ್ಕೆ ಆಗ್ರಹಿಸಿ ಜಿಲ್ಲಾ ವಿತರಕರ ಸಂಘದಿಂದ ಶುಕ್ರವಾರ ನಗರದಲ್ಲಿ ಸ್ವಯಂ ಪ್ರೇರಿತ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕಿಶೋರ್ ಬಾಬು ತಿಳಿಸಿದರು. ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಆನ್ಲೈನ್ ವ್ಯವಹಾರದಿಂದ ವರ್ತಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ಇದರಿಂದ ನಗರದಲ್ಲಿ 500ಕ್ಕೂ ಹೆಚ್ಚು ವರ್ತಕರ ಬದುಕು ಬೀದಿಗೆ ಬರುವುದರಿಂದ ಆನ್ಲೈನ್ ಮಾರಾಟ ವ್ಯವಸ್ಥೆ ಖಂಡಿಸಿ ಶುಕ್ರವಾರ ಬೆಳಗ್ಗೆ 09 ಗಂಟೆಯಿಂದ ಸ್ವಯಂ ಪ್ರೇರಿತ ಬಂದ್ ಹಮ್ಮಿಕೊಂಡಿದ್ದೇವೆ ಎಂದರು. 

ಈ ಬಂದ್ನ ಅಂಗವಾಗಿ ಮೀನಾಕ್ಷಿ ವೃತ್ತದಿಂದ ಮೆರವಣಿಗೆ 10 ಗಂಟೆಗೆ ಆರಂಭವಾಗಿ ನಗರದ ವಿವಿಧ ವೃತ್ತಗಳಿಂದ ಜಿಲ್ಲಾಧಿಕಾರಿಗಳ ಕಛೇರಿಗಳಿಗೆ ಅಗಮಿಸಿ ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದರು. ನಂತರ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು. 

ಕೆಲ ಸಂಸ್ಥೆಗಳು ಆನ್ಲೈನ್ನಲ್ಲಿ ವ್ಯಾಪಾರ ಮಾಡುವ ಮೂಲಕ ಸಕರ್ಾರಕ್ಕೆ ತೆರಗೆ ವಂಚನೆ ಮಾಡುತ್ತಿದ್ದು, ಏಕಸ್ವಾಮ್ಯ ವ್ಯಾಪಾರ ಮಾಡುವ ಹುನ್ನಾರು ನಡೆದಿದೆ. ಇದರಿಂದ ನಿರೋದ್ಯಗ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿ ಉದ್ಭವವಾಗಲಿದೆ. ಜೊತೆಗೆ ಆನ್ಲೈನ್ ವ್ಯಾಪಾರದಿಂದ ಬಹಳಷ್ಟು ಗ್ರಾಹಕರು ಮೋಸ ಹೋಗಿದ್ದಾರೆ. ಜನರಿಗೆ ಗುಣಮಟ್ಟದ ವಸ್ತುಗಳು ಬರದೇ ಅರ್ಧಕ್ಕೆ ವಾಪಾಸು ಕೊಡುವ ಪದ್ಧತಿ ಮುಂದುವರಿದಿದೆ ಅದಕ್ಕಾಗಿ ಜಿಲ್ಲಾ ಎಲ್ಲಾ ವಿತರಕರು ಶುಕ್ರವಾರ ಒಗ್ಗೂಡಿ ಸ್ವಯಂ ಪ್ರೇರಿತ ಬಂದ್ಗೆ ಚಾಲನೆ ನೀಡಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ಗಮನ ಸೆಳೆಯಲು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದು, ಅದೇರೀತಿ ಬಳ್ಳಾರಿಯಲ್ಲಿಯೂ ಸಹ ಸ್ವಯಂಪ್ರೇರಿತ ಬಂದ್ ಆಚರಿಸಲಿದ್ದೇವೆ ಎಂದು ವಿವರಿಸಿದರು. ಈ ಪತ್ರಿಕಾ ಗೋಷ್ಟಿಯಲ್ಲಿ ಉಪಾದ್ಯಕ್ಷ  ಮರಿಗೌಡ ಪಾಟೀಲ್, ಜಂಟಿ ಕಾರ್ಯದಶರ್ಿ ಗುರು ಪ್ರಸಾಧ್, ಪದಾಧಿಕಾರಿಗಳಾದ ಗಿರಿರಾಜ್, ಸಂತೋಷ ಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.