ಬಳ್ಳಾರಿ: ವಿಶ್ವಮಾತೃ ದಿನಾಚರಣೆ ನಿಮಿತ್ತ ವೃದ್ಧಾಶ್ರಮಕ್ಕೆ ಭೇಟಿ

ಲೋಕದರ್ಶನ ವರದಿ

ಬಳ್ಳಾರಿ 13: ನಗರದ ಆರ್,ವೈ,ಎಂ,ಇ,ಸಿ ತಾಂತ್ರಿಕ ಮಹಾವಿದ್ಯಾಲಯದ ಯೂತ್ ರೆಡ್ ಕ್ರಾಸ್ನ ವಿದ್ಯಾರ್ಥಿಗಳು ವಿಶ್ವಮಾತೃ ದಿನಾಚರಣೆಯ ಅಂಗವಾಗಿ  ಬಳ್ಳಾರಿಯ ಸಂಗನಕಲ್ ನಲ್ಲಿರುವ ಆದರ್ಶ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಸ್ತ್ರ ಹಾಗು ಆಹಾರ ವಿತರಣೆ ಮಾಡಿದರು.

ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ "ಯೂತ್ ರೆಡ್ ಕ್ರಾಸ್ " ನ ಸಂಯೋಜಕರು,  ಪ್ರಾದ್ಯಾಪಕ ಪ್ರೋ. ಆಲದಲ್ಲಿ ಶರಣಬಸಪ್ಪ ಮಾತನಾಡಿ "ಮನುಷ್ಯ ಜೀವನದಲ್ಲಿ ವೃದ್ದಾಪ್ಯ ಎನ್ನುವುದು ಅಂತಿಮಘಟ್ಟ, ಹಾಗೂ ಅವರುಗಳು ಎಳೆ ಮಕ್ಕಳಿದ್ದಹಾಗೆ, ಈ ಸಂಜಾವಸ್ಥೆಯ ಸಮಯದಲ್ಲಿ ಪ್ರಜ್ಞಾವಂತರಾದ ನಾವುಗಳು ಅವರುಗಳ ಪಾಲನೆ ಪೋಷಣೆ ಮಾಡುವುದು ನಮ್ಮ ಧರ್ಮಯುತವಾದಕರ್ತವ್ಯ ಹಾಗೂ ಮಾನವೀಯತೆ. ಈ ಕಾರ್ಯಕ್ರಮವು ವಿದ್ಯಾಥರ್ಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತಿಳಿಹೇಳುತ್ತದೆ" ಎಂದರು.

ಹಿರಿಯ ನಾಗರೀಕರು ನಮ್ಮ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ವೃದ್ಧಾಶ್ರಮದ ಮುಖ್ಯಸ್ಥರು ವೆಂಕೋಬಣ್ಣ, ಶಿವರಾಮ್, ಪ್ರಾದ್ಯಾಪಕ ಪ್ರೋ.ಹನುಮಂತ ರಾವ್ ಹಾಗೂ ವಿದ್ಯಾಥರ್ಿಗಳು ವಿಕಾಸ್, ಭಾಸ್ಕರ್, ಮಹೇಶ್, ಅರ್ಜುನ್, ಪ್ರಿಯಾಂಕ, ಅರ್ಪಿತ  ಲಾವಣ್ಯ, ಶಿವಾನಂದ, ವೀರೇಶ್, ಮೈತ್ರಿ, ಮಲ್ಲಿಕಾರ್ಜುನ  ಇತರರು ಭಾಗವಹಿಸಿದ್ದರು. 

ಈ ಸದುದ್ದೇಶದ ಕಾರ್ಯಕ್ರಮವನ್ನು ಆಯೋಜಿಸಲು ಸಮ್ಮತಿಸಿ ಸಹಕರಿಸಿದವರು ಮಹಾವಿದ್ಯಾಲಯದ ಅಧ್ಯಕ್ಷರು ಜೆ.ಎಸ್.ಬಸವರಾಜ, ಪ್ರಾಂಶುಪಾಲರು ಡಾ.ಕುಪ್ಪಗಲ್ ವಿರೇಶ್, ಉಪಪ್ರಾಂಶುಪಾಲರು ಡಾ. ಟಿ. ಹನುಮಂತರೆಡ್ಡಿ, ಡಾ.ಸವಿತಾ ಸೊನೊಳಿ ಇವರುಗಳಿಗೆ ವೃದ್ಧಾಶ್ರಮದ ಮುಖ್ಯಸ್ಥರು ವೆಂಕೋಬಣ್ಣ ಧನ್ಯವಾದಗಳನ್ನು ಸಲ್ಲಿಸಿದರು.