ಬಳ್ಳಾರಿ 14: ಪ್ರತಿ ವರ್ಷದಂತೆ ಈ ವರ್ಷವು ಕನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಿ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿದರು. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ವಾಸವಿ ಹೋಮ ಮತ್ತು ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಲಕ್ಷ ಕುಂಕುಮಾರ್ಚನೆ, ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ ನಡೆಯಿತು. ನಂಜೆ 6:30 ರಿಂದ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು. ಜಿಲಾನಿಬಾಷಾ ಅವರಿಂದ ಮಕ್ಕಳ ನೃತ್ಯಕಾರ್ಯಕ್ರಮ ಜನರ ಆಕರ್ಷಣೆಯಾಗಿತ್ತು.
ಮೆರವಣಿಗೆಯಲ್ಲಿ ನಾಗಸ್ವರ, ಗೊಂಬೆಗಳ ಕುಣಿತ, ಮಹಿಳೆಯರ ವೀರಗಾಸೆ, ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮಹಿಳೆಯರ ನೃತ್ಯ ಮತ್ತು ಆಡುಗಳ ಮೂಲಕ ಮೆರವಣಿಗೆ ಸಾಗಿತು. ಈ ವಾಸವಿ ಜಯಂತಿ ಕಾರ್ಯಕ್ರಮ ನಡೆಸಲು ಶ್ರೀ ಕನಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಆರ್ಯವೈಶ್ಯ ಅಸೋಸಿಯೆಷನ್, ನಗರೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ವಾಸವಿ ಕಲ್ಯಾಣ ಮಂಟಪ, ವಾಸವಿ ಎಜುಕೇಷನ್ ಟ್ರಷ್ಟ್ ಮತ್ತು ಆರ್ಯವೈಶ್ಯಗಳ ಎಲ್ಲಾ ಸಂಘಗಳು ಈ ಒಂದು ಜಯಂತಿಗೆ ಸಹಕರಿಸಿದ್ದು ಈ ಉತ್ಸವದ ನೇತೃತ್ವವನ್ನು ಸ್ವಂತ ಗಿರಿಧರ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾಸವಿ ಇಂಟರ್ ನ್ಯಾಷನಲ್ಕ್ಲಬ್ ವತಿಯಿಂದ ರಕ್ತಧಾನ ಶಿಬಿರವನ್ನು ಏರ್ಪಡಿಸಿದ್ದು ನೂರಕ್ಕೂ ಹೆಚ್ಚು ಜನ ರಕ್ತಧಾನ ಮಾಡಿದರು. ಬೈರಾಪುರ ನಾರಾಯಣ ಶೆಟ್ಟಿ, ಮ್ಯಾನೆಜ್ಮೆಂಟ್ಗೆ ಟ್ರಷ್ಟ್ನವರ ನೇತೃತ್ವದಲ್ಲಿ ಪರಮನೆಂಟ್ ಜ್ವಯಿನ್ ಟ್ರಷ್ಟ್ ಟಿ.ಗೋವಿಂದಯ ಶೆಟ್ಟಿ, ಗಾದೆಂ ಗೋಪಾಲ ಕೃಷ್ಣ, ವಿಠ್ಠ ಕೃಷ್ಣಾಕುಮಾರ ಶೆಟ್ಟಿ, ಟಿ ಅಶ್ವತ್ ನಾರಾಯಣ ಶೆಟ್ಟಿ, ಜಯಂತಿ ಕಿಶೋರ್ ಕುಮಾರ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ಡಾ.ರಮೇಶ್ ಗೋಪಾಲ, ಜಯಪ್ರಕಾಶ್ ಜೆ.ಗುಪ್ತಾ, ನಾಮ ರಮೇಶ್, ನಾಮಾ ನಾಗರಾಜ, ವಿಠ್ಠ ಆನಂದ್, ಸೇರಿದಂತೆ ಸಂಘದ ಇನ್ನೂ ಅನೇಕ ಪ್ರಮುಖರು ದೇವಸ್ಥಾನದ ಗರ್ಭಗುಡಿಯಲ್ಲಿರುವ ದೇವಿಗೆ ವಿಶೇಷ ಪೂಜೆಯನ್ನು ನಡೆಸಿಕೊಟ್ಟರು. 102 ಗೋತ್ರದ ಆರ್ಯವೈಶ್ಯ ಬಂದುಗಳ ಸಹಕಾರದಿಂದ ಈ ವಾಸವಿ ಜಯಂತಿಯು ಅತೀ ವಿಜೃಂಭಣೆಯಿಂದ ನಡೆಯಿತು.