ಬಳ್ಳಾರಿ 12: ನಗರದ ಬೆಂಗಳೂರು ರಸ್ತೆಯಲ್ಲಿರುವ ಕನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬರುವ 14 ರಂದು ವಾಸವಿ ಜಯಂತಿಯ ಅಂಗವಾಗಿ ಕನಿಕಾ ಪರಮೇಶ್ವರಿ ದೇವಿಗೆ ದಿನನಿತ್ಯ ಒಂದೊಂದು ವಿವಿದ ಭಗೆಯ ಅಲಂಕಾರಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ದಿನನಿತ್ಯ ಸಂಜೆ ಗಾಯನ, ಸಂಗೀತ, ಪುರಾಣ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವೈಶ್ಯ ಸಮೂದಾಯದ ಮಹಿಳೆಯರಿಂದ ಕೋಲಾಟ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.
ಜೊತೆಗೆ ಮಕ್ಕಳಿಂದ ನೃತ್ಯಪ್ರದರ್ಶನವನ್ನು ರೂಪಿಸಿದ್ದು ಸಾಹಸ್ರಾರು ವೈಶ್ಯ ಸಮೂದಾಯದ ವಿಕ್ಷಕರಿಂದ ಮನೋರಂಜನೆಯನ್ನು ರಂಜಿಸಿದರು. ಕೊನೆಗೆ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಬಂಗಾರ ಕಚಿತ ಆಭರಣಗಳನ್ನು ಸಿಂಗರಿಸಿ ಹೂವಿನ ಅಲಂಕಾರದೊಂದಿಗೆ ಜನ ಆಕರ್ಷಣೆಯಾಗಿ ಭಕ್ತರ ಮನಸನ್ನು ಆಕಷರ್ಿಸಿಸಿತ್ತು. ಅಂತಯೇ ನಸುಕಿನ ಜಾವ ವಿಶೇಷ ಅಭಿಷೇಕ ಮಾಡುವ ಮೂಲಕ ಅಲಂಕಾರವನ್ನು ಮಾಡಿ ಮಹಿಳೆಯರಿಂದ ಕಳಸದೊಂದಿಗೆ ದೇವಿಯ ವಿಗ್ರವನ್ನು ಮೆರವಣಿಗೆಯ ಮುಖಾಂತರ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತದೆ. ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವ್ಯೆವೆಸ್ಥೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ.