ಬಳ್ಳಾರಿ: ಗೃಹಮಂಡಳಿ ಮನೆ ಬೆಲೆ ಬಾಳುವ ವಸ್ತುಗಳ ಕಳ್ಳತನ

ಲೋಕದರ್ಶನ ವರದಿ

ಬಳ್ಳಾರಿ 07: ನಗರದ ಹೊರವಲಯದಲ್ಲಿ ನಿಮರ್ಿಸಿರುವ ಕರ್ನಾಟಕ ಗೃಹ ಮಂಡಳಿಯ ಮಾದರಿಯ 50 ಮನೆಗಳ ಪೈಕಿ 5 ಮನೆಯಲ್ಲಿ ಕಳ್ಳತನ ನಡೆದಿರುವ ಗಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಆಂಧ್ರಾಳ ಹತ್ತಿರ ಕರ್ನಾಟಕ ಗೃಹಮಂಡಳಿ ನಿಮರ್ಾಣ ಮಾಡಿರುವ ಮಾದರಿಯ 50 ಮನೆಗಳ ಪೈಕಿ 5 ಮನಗಳ ಕಿಡಕಿ ಗ್ರೀಲ್ ಮುರಿದು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. 

ಜೊತೆಗೆ ಮನೆಯಲ್ಲಿರುವ ಪ್ಲಮ್ಮಿಂಗ್ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಸರಿ ಸುಮಾರು 2 ಲಕ್ಷ ರೂ ಮೆಲ್ಮಟ್ಟ ವಸ್ತುಗಳ ಕಳ್ಳತನವಾಗಿದೆ. ಈ ಗಟನೆ ಸೋಮುವಾರ ರಾತ್ರಿ ವೇಳೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನದಲ್ಲಿ ಗೃಹಮಂಡಳಿ ಸಾರ್ವಜನಿಕರಿಗೋಷ್ಕರ ನಿವಾಸಿಗಳ ಪ್ಲಾಟ್ ಗಳನ್ನು ನಿಮರ್ಿಸಿದೆ. ಮನೆಗಳು ಮಾರಾಟವಾಗಿದ್ದರೂ ಮೂಲಬೂತ ಸೌಕರ್ಯ ಒದಗಿಸಲು ಗೃಹಮಂಡಳಿ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಮನೆ ಖರೀದಿ ಮಾಡಿದ ಗ್ರಾಹಕರು ವಾಸಮಾಡಲು ಸಾದ್ಯವಾಗದ ಕಾರಣದಿಂದಾಗಿ ಯಾರೂ ಮನೆಗಳಲ್ಲಿ ಬರುತ್ತಿಲ್ಲ. ಅದಕ್ಕಾಗಿ ಈ ಪ್ರದೇಶದಲ್ಲಿ ಸೂಕ್ತ ರೀತಿಯ ಭದ್ರತೆ ಇಲ್ಲದ ಕಾರಣದಿಂದ ಇಂತಹ ಅವಗಡಗಳು ನಡೆಯುತ್ತಿವೆ. ಈಗಲಾದರೂ ಗೃಹಮಂಡಳಿಯ ಅಧಿಕಾರಿಗಳು ಇತ್ತಕಡೆ ಎಚ್ಚೆತ್ತುಕೊಂಡು ಭದ್ರತೆ ಕಲ್ಪಿಸುವ ಮೂಲಕ ಅಲ್ಲಿಯ ನಿವಾಸಿಗಳಿಗೆ ಅಭಯವನ್ನು ನಿಡುತ್ತಾರಾ ಎಂದು ಜನರು ಆಶಿಸುತ್ತಿದ್ದಾರೆ.