ಬಳ್ಳಾರಿ: ನೀರಿನ ಬರದಲ್ಲಿ ಗಣಿನಾಡು ನಾಚಿಕೆಗೇಡಿನ ಸರಕಾರ

ಬಳ್ಳಾರಿ 11: ಜಿಲ್ಲೆ ಒಂದಾನೊಂದು ಕಾಲದಲ್ಲಿ ಪ್ರಪಂಚ ಪುಟದಲ್ಲಿ ಖ್ಯಾತಿಯನ್ನು ಪಡೆದಿರುವ ಜಿಲ್ಲೆಯಾಗಿತ್ತು. ಅಕ್ರಮವೋ, ಸಕ್ರಮವೋ ಗಣಿಗಾರಿಕೆಯಲ್ಲಿ ಚಿನ್ನದನಾಡು ಎಂದು ಪ್ರಪಂಚ ತಿರುಗಿನೋಡುವಂತಹ ಜಿಲ್ಲೆಯಾಗಿತ್ತು. ಆಗಿನ ಸಂದರ್ಭದಲ್ಲಿ ಗಣಿ-ದನಿಗಳ ಸರಕಾರವಿದ್ದು ಕೋಟಿ, ಕೋಟಿ ಗಣಿಗಾರಿಕೆಯಿಂದ ಸಂಪಾದನೆ ಮಾಡಿಕೊಂಡು ಹೆಲಿಕ್ಯಾಪ್ಟರ್ಗಳಲ್ಲಿ ಸಂಚಾರ ಮಾಡಿದರು. ಚಾಯ್, ಕಾಫಿಗೆ ಬಳ್ಳಾರಿಯಿಂದ ಬೆಂಗಳೂರಿಗೆ ಹಾರಾಡುತ್ತಿದ್ದರು. 

ಚಿನ್ನದ ಸಿಂಹಾಸನಗಳ ಮೇಲೆ ಕುಳಿತು ಶ್ರೀ ಕೃಷ್ಣದೇವರಾಯರನ್ನು ಹೋಲಿಸಿಕೊಂಡರು. ಆದರೆ ಜಿಲ್ಲೆಗೆ ಮಾತ್ರ ಸೂಕ್ತ ನೀರಿನ ವ್ಯೆವೆಸ್ಥೆ ಮಾಡಲು ಗಣಿ ದನಿಗಳಿಗೆ ಸಾದ್ಯವಾಗಲಿಲ್ಲ. ಅಂದಿನಿಂದ ಇಂದಿನವರೆಗೆ ಸಾಕಷ್ಟು ಸರಕಾರಗಳು ರಚನೆಯಾದರೂ ಸಹ ನೀರಿನ ಸಮಸ್ಯಯನ್ನು ನಿಭಾಯಿಸಲು ಸಾದ್ಯವಾಗಲಿಲ್ಲ. 

ಬಳ್ಳಾರಿ ಜಿಲ್ಲೆಯಲ್ಲಿ ನಗರ, ಪಟ್ಟಣ ವಾಸಗಳು ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ವಿಚಾರ ಸರಕಾರಗಳಿಗೆ ನಾಚಿಕೆಗೇಡು ಸಂಘತಿಯಾಗಿದೆ. ಇತ್ತ ಜಿಲ್ಲಾ ಆಡಳಿತ ಸೂಕ್ತ ನೀರಿನ ವ್ಯೆವೆಸ್ಥೆಯನ್ನು ಮಾಡಲು ಸಂಪೂರ್ಣ ವಿಪಲವಾಗಿದೆ. ತುಂಗಭದ್ರ ನದಿ ಹತ್ತಿರದಲ್ಲಿದ್ದರೂ ಕುಡಿಯುವ ನೀರಿನ ವಿಚಾರ ಸೂಕ್ತ ಪರಿಹಾರ ಕಾಣಲು ಯಾರಿಂದಲೂ ಆಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳ ಡೊಂಬರಾಟ ಕೇಳುವಂತಿಲ್ಲ. ಇತ್ತೇಚೆಗೆ ಸಂಸದರಾಗಿರುವ ಉಗ್ರಪ್ಪ ಜಿಲ್ಲೆಯಲ್ಲಿ ನೀರಿನ ಸಮಸ್ಯಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನಿಡಿದ್ದರು. 

ಆದರೆ ಆ ಭರವಸೆಗಳು ಕನಸಾಗಿಯೇ ಉಳಿದವು. ನಗರವಾಸಿಗಳು ಇತ್ತ ರಾಜಕಾರಣಿಗಳಿಗೆ, ಜಿಲ್ಲಾಡಳಿತಕ್ಕೆ ಹುಗಿದು ಹೀಡಿ ಶಾಪವನ್ನು ಹಾಕುತ್ತಿದ್ದಾರೆ. ಪ್ರಸ್ತುತ ನಗರದಲ್ಲಿ ಕೆರೆಗಳಲ್ಲಿ ಸಂಗ್ರಹಿಸಿರುವ ಕುಡಿಯುವ ನೀರು 48 ದಿನಗಳಿಗೆ ಮಾತ್ರ ಸರಿಹೋಗುತ್ತಿದ್ದು ಮಳೆರಾಯ ಬಂದಿಲ್ಲ ಎಂದರೆ ಜಿಲ್ಲೆಯಲ್ಲಿ ನೀರಿನ ಮಹಾಯುದ್ದ ನಡೆದರೂ  ಆಶ್ಚರ್ಯವಿಲ್ಲ. ಈಗಾಗಲೇ ಬಹುತೇಕ ನಗರವಾಸಿಗಳು ನೀರಿನ ತೊಂದರೆಯಿಂದ ನಗರವನ್ನು ಬಿಟ್ಟು ಹೋಗಿದ್ದು ಆಶ್ಚರ್ಯಕರವಾಗಿದೆ. 

ನಗರದಲ್ಲಿ ಬಹುತೇಕ ಪ್ರದೇಶಗಳಲ್ಲಿ ಬಳಕೆಮಾಡುವ ನೀರಿನ ಸೌಲತ್ತು ಇದ್ದರೂ ಸರಕಾರ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗೆ ಮುಂದುವರೆದರೇ ನಾಗರಿಕರು ಚಂಬು, ಗಡಗಿ ಹಿಡಿದು ಹೋರಾಟ ಮಾಡಬೇಕಾಗುತ್ತದೆ.