ಲೋಕದರ್ಶನ ವರದಿ
ಬಳ್ಳಾರಿ 01: ಸಮಾಜದಲ್ಲಿ ಕಾಮರ್ಿಕರ ಪಾತ್ರ ಮಹತ್ವದಾಯಕವಾಗಿದ್ದು, ಜೀವನದ ಎಲ್ಲಾ ಆಯಾಮಗಳಿಗೆ ಕಾಮರ್ಿಕ ಶ್ರಮ ತುಂಬಾನೆ ಆಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಮಿಕ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ನಲ್ಲಚೆರುವು ಬಳಿರುವ ಈಜುಕೋಳ ಒಳಾಂಗಣ ಕ್ರೀಡಾಂಗಣ ಹಮ್ಮಿಕೊಂಡಿದ್ದ ಕಾರ್ಮಿಕ ಸಮ್ಮಾನ ದಿನಾಚರಣೆ ಅಂಗವಾಗಿ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಷ್ಕಾರ ಪ್ರಧಾನ ಸಮಾರಂಭ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಪಾರ ಕೇಂದ್ರ ಉದಯವಾಗಬೇಕಾದರೆ ಕಾರ್ಮಿಕರ ಪಾಲ್ಗೋಳ್ಳುವಿಕೆ ತುಂಬಾನೆ ಆಗತ್ಯತೆ ಇದೆ. ಇವರಿಗೆ ಸರ್ಕಾರದ ವಿವಿಧ ಯೋಜನೆಗಳ, ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಸೂಚಿಸಬೇಕು ಎಂದರು.
ಕಾನೂನು ಸೇವೆಗಳ ಮೂಲಕ ಕಾಮರ್ಿಕರಿಗೆಗೆ ವಿಶೇಷ ಕಾನೂನುಗಳಿವೆ, ಕಾರ್ಮಿಕರು ಕಾನೂನಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೂಲಕ ತೊಂದರೆಗಳನ್ನು ಉಚಿತವಾಗಿ ಬಗೆಹರಿಸಲಾಗುತ್ತದೆ ಇದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ದಕ್ಷಿಣ ಕರ್ನಾಟಕ್ಕಿಂತ ಉತ್ತರ ಕರ್ನಾಟಕದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಬಹಳ ಇದೆ. ಇದನ್ನು ಹೊಗಲಾಡಿಸಲು ಸರ್ಕಾರ ಜೊತೆಗೆ ಸ್ಥಳೀಯರ ಸಹಾಯದಿಂದ ಈ ಪದ್ಧತಿಯನ್ನು ತೊಲಗಿಸೋಣ ಎಂದು ಹೇಳಿದರು ಇದರ ಬಗ್ಗೆ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ 13 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 143 ಕಾರ್ಮಿಕರಿಗೆ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಷ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷರಾದ ಭಾರತಿ ತಿಮ್ಮಾರೆಡ್ಡಿ, ಸಹಾಯಕ ಆಯುಕ್ತರಾದ ರಮೇಶ್ ಪಿ.ಕೋನರೆಡ್ಡಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಎನ್.ಐಲಿ, ರಾಷ್ಟೀಯ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರ ಮೌನೇಶ್, ಕಾಮರ್ಿಕ ನಿರೀಕ್ಷಕರಾದ ರವಿದಾಸ, ಕಾರ್ಯನಿರ್ವಹಕ ಎನ್.ಆರ್ ಶಿವರಾಜ್ ಸೇರಿದಂದ ವಿವಿಧ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಇದ್ದರು.