ಬಳ್ಳಾರಿ: ಕೊಡುವ ಕೈ ದೇವನಿಗೆ ಸೈ: ಸಾಮಾಜಿಕ ನಾಟಕ ಪ್ರದರ್ಶನ

ಬಳ್ಳಾರಿ 14: ಕೊಂಚಿಗೇರಿಯ ಕವಿ, ಸಾಹಿತಿ, ಕಲಾವಿದ ಡಿ.ಮಲ್ಲಿಕಾಜರ್ುನ ರವರ 3ನೇ ಕೃತಿ "ಕೊಡುವ ಕೈ ದೇವನಿಗೆ ಸೈ" ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಾಯಿತು. ಮಾತೃ ಸೇವಾ ಟ್ರಸ್ಟ್ನ ಸಾರಥ್ಯದಲ್ಲಿ ಜರುಗಿದ ಈ ಪ್ರಥಮ ಪ್ರಯೋಗವನ್ನು ಶಿವಪ್ಪ ತಾತ ಮತ್ತು ಮನಿಹಳ್ಳಿಯ ಷ.ಬ್ರ. ಮಳೆ ಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟನೆ ಮಾಡಿದರು. ಊರಿನ ಗೌರವಾನ್ವಿತ ವ್ಯಕ್ತಿಗಳು, ಕೊಂಚಿಗೇರಿ ಗ್ರಾಮ ಪಂಚಾಯಿತಿಯ ಎಲ್ಲಾ ಪದಾಧಿಕಾರಿಗಳು ಅತಿಥಿಗಳಾಗಿ ಆಗಮಿಸಿದ್ದರು. 

ಹಿರಿಯ ರಂಗಕಮರ್ಿ ಆರ್.ವೀರನಗೌಡರನಿರ್ದೇಶನ, ಚಿತ್ರದುರ್ಗದ ಎಸ್.ಎಲ್.ಆರ್. ಮೆಲೋಡೀಸ್ನ ಸಂಗೀತ ಬಳಗ, ಬೆಂಗಳೂರಿನ ಭವಾನಿಯವರ ನೃತ್ಯಗಳು ನಾಟಕಕ್ಕೆ ಮೆರುಗು ನೀಡಿದವು. ನಾಟಕದ ಪ್ರಮುಖ ಪಾತ್ರಗಳಾದ ಶಿವಾನಗೌಡ ವಿಷಕಂಠ ರುದ್ರಗೌಡ ಮಲ್ಲಿಕಾರ್ಜುನ ಪಾತ್ರಗಳಲ್ಲಿ ಅನುಕ್ರಮವಾಗಿ ಹಚ್ಚೊಳ್ಳಿ ಅಮರೇಶ, ಮೋಕಾ ಹೆಚ್.ಎಂ.ರಾಮೇಶ್ವರ, ಹಿರಿಯ ರಂಗಕಮರ್ಿ ಗೆಣಿಕೆಹಾಳು ತಿಮ್ಮನಗೌಡ ಮತ್ತು ಕವಿ ಡಿ ಮಲ್ಲಿಕಾರ್ಜುನ  ಪಾತ್ರಗಳು ಜನಮನಸೂರೆಗೊಂಡವು. ಹುಚ್ಚಪ್ಪಗೌಡ, ಕಪಿಲ ಮತ್ತು ಚನ್ನಿಯರ ಪಾತ್ರಗಳು ಹಾಸ್ಯದ ಹೊನಲನ್ನೇ ಚೆಲ್ಲಿದವು. ಭರಮಪ್ಪನ ಪಾತ್ರದಲ್ಲಿ ಎ.ಎಂ.ಪಿ. ವೀರಶ್ ಶೇಖರ ಪಾತ್ರದಲ್ಲಿ ಕೊಂಚಿಗೇರಿ ಕೋರಿ ನೀಲಕಂಠ, ನಂಜುಂಡನ ಪಾತ್ರದಲ್ಲಿ ಹಲಕುಂದಿ ಹೆಚ್.ವೀರನಗೌಡ ಇದ್ದರು. ಶಿವನಗೌಡ ಪತ್ನಿ ಪಾರ್ವತಿ ಪಾತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಆದೋನಿ ವೀಣಾಕುಮಾರಿಯವರು ಮಹಿಳೆಯರ ಮನ ಕರಗುವಂತೆ ಮಾಡಿದರು. ಕವಿ ಡಿ.ಮಲ್ಲಿಕಾಜರ್ುನ ರವರನ್ನು ಊರಿನ ಗಣ್ಯರು, ನೇಹಾ ಸಂಸ್ಥೆಯ ರಂಗಕರ್ಮಿ  ನಾಡಂಗ ಬಸವರಾಜರು ಸನ್ಮಾನಿಸಿದರು. ರಾತ್ರಿಪೂತರ್ಿ ಇಡೀ ನಾಟಕವನ್ನು ಜನತುಂಬಿದ ಪ್ರೇಕ್ಷಕರು ವೀಕ್ಷಿಸಿದ್ದು, ಕೊಂಚಿಗೇರಿ ಗ್ರಾಮದ ಕಲಾಭಿಮಾನಿ, ಕಲಾ ಪೋಷಕರು ವಿಶೇಷವಾಗಿತ್ತು.