ಬಳ್ಳಾರಿ: ಮೂಢನಂಬಿಕೆಯಿಂದ ಗ್ರಂಥಗಳ ನಾಶ ಕುಲಪತಿ ಡಾ.ರಮೇಶ ಹೇಳಿಕೆ

ಬಳ್ಳಾರಿ 25: ಗ್ರಂಥಗಳು ಹುಟ್ಟಿದ ನಂತರ ನಾಶವಾಗಬಾರದು. ಅವು ನಮ್ಮ ಜ್ಞಾನ ಸಂಪತ್ತು. ಹಸ್ತಪ್ರತಿಗಳು ಹಾಗೂ ಶಾಸನಗಳು ನಮ್ಮ ನಾಡು, ನುಡಿ, ನೆಲ, ಜಲ, ಕಲೆ ಮತ್ತು ಸಂಸ್ಕೃತಿ, ಚರಿತ್ರೆ, ಸಂಪ್ರದಾಯ, ಆಚಾರ-ವಿಚಾರ, ವೈದ್ಯಶಾಸ್ತ್ರ, ಆರೋಗ್ಯ ಹಾಗೂ ಇತರೆ ವಿಚಾರಗಳನ್ನೊಳಗೊಂಡ ಪ್ರತಿಬಿಂಬವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಎರಡು ದಿನಗಳ ಅಖಿಲ ಕನರ್ಾಟಕ ಹದಿನಾರನೆಯ ಹಸ್ತಪ್ರತಿ ಸಮ್ಮೇಳನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಸ್ತಪ್ರತಿ, ಶಾಸನ ಹಾಗೂ ಗ್ರಂಥಗಳು ನಮ್ಮ ಪಾರಂಪರಿಕ ಜ್ಞಾನವನ್ನು ಹೊಂದಿವೆ. ಇಂತಹ ಜ್ಞಾನ ಸಂಪತ್ತನ್ನು ಜನರು ಮೌಢ್ಯಗಳಿಗೆ ಬಲಿಯಾಗಿ ನಾಶ ಮಾಡುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಮುಖ್ಯವಾಗಿ ಹಿರಿಯ ವಿದ್ವಾಂಸರಾದ ಡಾ. ಆರ್.ಸಿ. ಹಿರೇಮಠ ಅವರ ಚಿಂತನೆಗಳು, ಸಂಶೋಧನೆಗಳು ಹಾಗೂ ಸಾಧನೆಗಳನ್ನು ಅವಲೋಕನ ಮಾಡಿಕೊಳ್ಳಲಾಗುತ್ತದೆ ಎಂದರು. ಇನ್ನು ಡಾ. ಆರ್.ಸಿ. ಹಿರೇಮಠ ಅವರ ಸಂಸ್ಥೆಯಿಂದ ಬಂದಂತಹ ಡಾ. ಚಂದ್ರಶೇಖರ ಕಂಬಾರರು, ಡಾ. ಎಂ.ಎಂ. ಕಲ್ಬುಗರ್ಿ, ಡಾ. ಎ. ಮುರಿಗೆಪ್ಪ ಹಾಗೂ ಡಾ. ಮಲ್ಲಿಕಾ ಎಸ್. ಘಂಟಿ ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ವಿಶ್ವವಿದ್ಯಾಲಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನರಾದ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಕೆ. ರವೀಂದ್ರನಾಥ  ಸಂಪಾದಿಸಿರುವ ಹಸ್ತಪ್ರತಿ ವ್ಯಾಸಂಗ-19 ಹಾಗೂ ಲಿಂಗಣ್ಣ ಕವಿಯ ವರರಮ್ಯ ರತ್ನಾಕರ ಎಂಬ ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು.

ಅಖಿಲ ಕನರ್ಾಟಕ ಹಸ್ತಪ್ರತಿ ಸಮ್ಮೇಳನಾಧ್ಯಕ್ಷರಾದ ಡಾ.ಟಿ.ಎನ್.ನಾಗರತ್ನ ಮಾತನಾಡಿ ಓದು-ಬರಹಗಳು ತಮ್ಮ ಭಾವನೆ ವಿಚಾರ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮನುಷ್ಯ ಮಾತ್ರನಿಗೆ ಸಿದ್ಧಿಸಿರುವ ಸಶಕ್ತ ವರ. ಕನ್ನಡಿಗರಿಗೆ ಆ ವರ ಕನ್ನಡ ಭಾಷೆ-ಲಿಪಿಗಳ ಮೂಲಕ ಲಭಿಸಿದೆ. ಸು.ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಹಿಡಿದು ಇಲ್ಲಿಯವರೆಗೆ ಈ ಕಾರ್ಯ ನಿರಂತರವಾಗಿ ನಡೆಯುತ್ತ ಕನ್ನಡಿಗರ ಜ್ಞಾನವೃದ್ದಿಗೆ, ಸಂಸ್ಕೃತಿಯ ವಿಕಾಸಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಈ ಸಮ್ಮೇಳನದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಪ್ರಾರ್ಥನ ಗೀತೆ ಹಾಡಿದರು. ಸಂಶೋಧನಾ ವಿದ್ಯಾರ್ಥಿಗಳಾದ ಚಂದ್ರಶೇಖರ ಕಾಳಣ್ಣನವರ ಹಾಗೂ ಐಶ್ವರ್ಯ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು. ಪಿ.ಡಿ.ಎಫ್. ಸಂಶೋಧನಾಥರ್ಿಯಾದ ಡಾ.ಕೇಶವಮೂತರ್ಿ ಕಾರ್ಯಕ್ರಮವನ್ನು ವಂದಿಸಿದರು. ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ, ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.