ಬಳ್ಳಾರಿ 15: ಜಿಲ್ಲೆಯಲ್ಲಿಯ ವಿವಿದ ಪ್ರಕಾರಗಳ ಕಲಾವಿದರನ್ನು ಒಂದೇ ಸೂರಿನ ಅಡಿ ಸೇರಿಸುವ ಮತ್ತು ಅವರ ಕಲಾಪ್ರಕಾರಗಳನ್ನು ಜನತೆಗೆ ಪರಿಚಯಿಸುವ ಪ್ರಯತ್ನವೇ ಬಳ್ಳಾರಿ ಸಾಂಸ್ಕೃತಿಕ ಉತ್ಸವ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಮಿತಿಯ ಪ್ರಮುಖರಾದ ಜಯಪ್ರಕಾಶ್.ಜೆ.ಗುಪ್ತಾ, ಪೋಲಾರಾದಕೃಷ್ಣ, ಗುರುರಾಜ್, ಬಿಸಿಲಹಳ್ಳಿ ಬಸವರಾಜ ಮತ್ತು ತಿಪ್ಪೇರುದ್ರ ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.
ಸಾಂಸ್ಕೃತಿಕ ಉತ್ಸವದಲ್ಲಿ ರಾಜ್ಯಮಟ್ಟದಲ್ಲಿ ಚಿತ್ರಸಂತೆ, ಚಾಯಾಚಿತ್ರಸಂತೆ, ಪುಸ್ತಕ ಸಂತೆ ಹಾಗೂ ಆಹಾರ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಗರದ ಸರಕಾರಿ (ಮುನ್ಟಿಪಲ್ ಕಾಲೇಜು ಮೈದಾನ) ಡಾ.ರಾಜಕುಮಾರ ರಸ್ತೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೇ ಶಾಸ್ತ್ರಿಯ ಜನಪದ ಮತ್ತು ಆಧುನಿಕ ಶೈಲಿಯಲ್ಲಿ ನೃತ್ಯ, ಸಂಗೀತ, ರಸಮಂಜರಿ, ಕವಿಗೋಷ್ಟಿ, ಹಾಸ್ಯ ಅರಟೆ, ಜಾದುಪ್ರದರ್ಶನ, ಮಿಮಿಕ್ರಿಯೆ ಮೊದಲಾದ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ ಜೊತೆಗೆ ಏಕಕಾಲದಲ್ಲಿ ಹದಿನೈದು ನೂರು ವಿವಿಧ ಶಾಲಾ ವಿದ್ಯಾಥರ್ಿಗಳಿಂದ ನಾಡಗೀತೆ ಕಾರ್ಯಕ್ರಮವನ್ನು ಇದೇ ಮೊಟ್ಟಮೊದಲ ಬಾರಿಗೆ ಆಯೋಜಿಸಲಾಗಿದೆ. ಅಂತಯೇ ಆಹಾರಸಂತೆಯಲ್ಲಿ ಉತ್ತರ ಕನರ್ಾಟಕ ಶೈಲಿಯ ಆಹಾರ ಪದಾರ್ಥಗಳ ಮಾರಾಟ ನಡೆಯಲಿದೆ. ಈ ಉತ್ಸವದಲ್ಲಿ ಮಾರಾಟ ಮಾಡಲು ಆಸಕ್ತರಿಗೆ ನೀಗದಿತ ಶುಲ್ಕ ಕಟ್ಟಬೇಕಾಗುತ್ತದೆ ಎಂದರು.
ಹೆಚ್ಚಿನ ಮಾಹಿತಿಗಾಗಿ 31.05.2019ರೊಳಗೆ ಬಸವರಾಜ್.ಬಿ ಮೊ:7337745561, ಶರಣಬಸವನ ಗೌಡ.ಹೆಚ್ಮೊ:9591110159 ಇವರಿಗೆ ಸಂಪರ್ಕಿಸಬಹುದು