ಬಳ್ಳಾರಿ: ರಂಗತೋರಣದ 13ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವ ಮಾ.13ರಿಂದ ರಂಗಮಂದಿರದಲ್ಲಿ ಪ್ರದರ್ಶನ

ಲೋಕದರ್ಶನ ವರದಿ

ಬಳ್ಳಾರಿ 27: ರಂಗತೋರಣದಿಂದ ಕಲ್ಯಾಣ ಕನರ್ಾಟಕ ಬಳ್ಳಾರಿಯಲ್ಲಿ 13ನೇ ರಾಜ್ಯ ವಿದ್ಯಾಥರ್ಿ ನಾಟಕೋತ್ಸವ ಮಾರ್ಚ 13ರಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮೂರು ದಿನಗಳ ಕಾಲ ನಿರಂತರ ನಾಟಕೋತ್ಸವ ನಡೆಯಲಿದೆ ಎಂದು ರಂಗತೋರಂದ ಪದಾಧಿಕಾರಿಗಳು ತಿಳಿಸಿದರು. 

ಈ ಕುರಿತು ಚೇಂಬರ್ ಆಫ್ ಕಾಮರ್ಸಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿ ಸ್ವಾಗತ ಸಮಿತಿ ಅಧ್ಯಕ್ಷ ಪಲ್ಲೆದ ಪಂಪಾಪತಿ, ಪ್ರಧಾನ ಕಾರ್ಯದಶರ್ಿ ಗಣಪಾಲ್ ಐನಾಥ್ ರೆಡ್ಡಿ, ಕಾರ್ಯದಶರ್ಿ ಕಪ್ಪಗಲ್ಲ ಪ್ರಭುದೇವ್, ಮಾತಾನಾಡಿ ನಾಟಕೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 25 ತಂಡಗಳು ಆಗಮಿಸಲಿದ್ದು, ಪ್ರತಿ ನಾಟಕವೂ 60 ರಿಂದ 70 ನಿಮಿಷಗಳ ಕಾಲ ಪ್ರದರ್ಶನಗೊಳ್ಳಲಿದೆ, ನಾಟಕದ ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಬಂದು ನಾಟಕವನ್ನು ವೀಕ್ಷಿಸಬಹುದು ಎಂದು ಕರೆ ನೀಡಿದರು. 

ಈ ನಾಟಕದಲ್ಲಿ ರಂಗತೋರಣ ಪ್ರಶಸ್ತಿ, ರಂರತೋರಣ ಪುರಸ್ಕಾರ, ಹಾಗೂ ಪ್ರತಿ ನಾಟಕಕ್ಕೆ ಒಳ್ಳೆಯ ನಟನೆಗೆ ಪುರಸ್ಕಾರಗಳು ಸಹ ದೊರಯಲಿವೆ, ಈ ನಾಟಕೋತ್ಸವದ ಸರ್ವಾಧ್ಯಕ್ಷರಾಗಿ ಹೊಸಪೇಟೆಯ ರಂಗತಪಸ್ವಿ ಪಿ.ಅಬ್ದುಲ್ ಅವರನ್ನು ಕರೆತಂದು ನಾಟಕಕ್ಕೆ ಶೋಭೆ ನೀಡಲಿದ್ದೇವೆ. ಜೊತೆಗೆ ರಂಗವೈಭವ ಜಾತ್ರೆ, ರಂಗಕಲಾತೋರಣ, ನುಡಿ ತೋರಣ, ರಂಗ ಜಗುಲಿ, ರಂಗ ಬೆಳದಿಂಗಲು, ರಂಗ ಚಾವಡಿ, ಮಾಸದ ದೃಶ್ಯ, ಮಾತುಗಳು, ರಂಗಮಿತ್ರ, ಬೀದಿ ನಾಟಕ ಪ್ರದರ್ಶನಗೊಳ್ಳಿಲಿವೆ ಎಂದರು. 

ನಾಟಕಕ್ಕೆ ಆಗಮಿಸುವ ಕಲಾವಿದರ ತಂಡ ಪ್ರತಿ ನಾಟಕಕ್ಕೆ 20ಜನ ಹೊಂದಿರುತ್ತಾರೆ. ಅವರಿಗೆ ಊಟ, ವಸತಿ, ಸಾರಿಗೆ ವೆಚ್ಚವನ್ನು ರಂಗತೋರಣ ಬರಿಸಲಿದೆ ಎಂದು ವಿವರಿಸಿದರು.