ಬಳ್ಳಾರಿ: ಕರ್ನಾಟಕ ರಾಜ್ಯ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶ ಉದ್ಘಾಟನೆ

ಲೋಕದರ್ಶನ ವರದಿ

ಬಳ್ಳಾರಿ 08: ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಸಂಸ್ಥೆಯ ವಿದ್ಯಾನಗರದಲ್ಲಿ ಕನರ್ಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಮತ್ತು ಬಳ್ಳಾರಿ ಜಿಲ್ಲಾ ಚೆಂಬರ್ ಆಫ್ ಕಾಮರ್ಸ ಜಂಟಿಯಾಗಿ ಹಮ್ಮಿಕೊಂಡಿದ್ದ ಕರ್ನಾಟಕ  ರಾಜ್ಯ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶಕ್ಕೆ ಶನಿವಾರ ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ, ವ್ಯೆವೆಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಈ ಸಮಾರಂಭಕ್ಕೆ ವಿಧಾನಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ಪೆರಿಕಲ್ ಸುಂದರ್, ಇನ್ನೂ ಮೊದಲಾದವರು ಹಾಜರಿದ್ದರು. ಜಿಲ್ಲಾ ಚೆಂಬರ್ ಆಫ್ ಕಾಮರ್ಸ ಅಧ್ಯಕ್ಷ ಡಾ.ಡಿ.ಎಲ್.ರಮೇಶ ಗೋಪಾಲ ಸ್ವಾಗತಿಸಿ ಸಮಾವೇಶದ ಉದ್ದೇಶದ ಬಗ್ಗೆ ಮಾತನಾಡಿದರು. ಜಿಲ್ಲಾ ಸಮನ್ವಯ ಅಧ್ಯಕ್ಷ ಯಶವಂತರಾಜ್ ಪ್ರಾಸ್ತವಿಕವಾಗಿ ಮಾತನಾಡಿ ರಾಜ್ಯದಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳ ವಿವರ ನೀಡಿದರು. ವಿದ್ಯಾವಂತ ಯುವ ಸಮೂಹಕ್ಕೆಲ್ಲಾ ಉದ್ಯೋಗಗಳನ್ನು ಸರಕಾರಗಳು ನೀಡಲು ಸಾದ್ಯವಿಲ್ಲ. ಅದಕ್ಕಾಗಿ ಖಾಸಗಿ ಉದ್ದೇಮಗಳು ಆರಂಭಗೊಂಡಲ್ಲಿ ಮಾತ್ರ ನಿರುದ್ಯೋಗ ನಿವಾರಣೆ ಸಾದ್ಯವಾಗುತ್ತದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ದೇಮಗಳ ಸ್ಥಾಪನೆಗೆ ಅವಶ್ಯಕತೆಯಾದ ನೀರು, ಜಮೀನು ಮೊದಲಾದ ಸಹಾಯ ಸಹಕಾರ ನೀಡಬೇಕೆಂದರು. ಬೆಂಗಳೂರಿನಲ್ಲಿ ಉದ್ದೇಮಿಗಳ ಸಂಖ್ಯೆ ಹೆಚ್ಚಿದ್ದು ಇನ್ನುಮುಂದೆ ಇತರ ಜಿಲ್ಲೆಗಳಲ್ಲಿ ಆರಂಭಿಸಲು ಸೂಚಿಸಲಾಗುತ್ತದೆ ಎಂದು ಎಫ್.ಕೆ.ಸಿ.ಸಿ ಐ ಅಧ್ಯಕ್ಷ ಸುಧಾಕರ್ ಶೆಟ್ಟಿ ವಿವರಿಸಿದರು.