ಬಳ್ಳಾರಿ: ಭತ್ತ ಖರೀದಿ ಜ.1ರಿಂದ ಆರಂಭ

ಲೋಕದರ್ಶನ ವರದಿ

ಬಳ್ಳಾರಿ 18: ಪಡಿತರ ಮೂಲಕ ವಿತರಣೆಯಾಗುವ ಅಕ್ಕಿಯನ್ನು ಮರಳಿಸಂಗ್ರಹಿಸಿ ಅದನ್ನು ರಿಪಾಲೀಶ್ ಮಾಡಿ,ರಿಪ್ಯಾಕ್ ಮಾಡಿ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅತ್ಯಂತ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಎಚ್ಚರಿಕೆ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಕ್ಕಿಗಿರಣಿ ಮಾಲೀಕರೊಂದಿಗೆ ಬುಧವಾರ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಇದು ಅತ್ಯಂತ ಗಂಭೀರ ಅಪರಾಧವಾಗಿದೆ. ಈ ರೀತಿ ರಿಪಾಲೀಶ್ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಗಳು ಬರುತ್ತಿದ್ದು,ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದ ಡಿಸಿ ನಕುಲ್ ಅವರು ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ ಮತ್ತು ಬ್ಲಾಕ್ಮಾಕರ್ೆಟ್ ಆ್ಯಕ್ಟ್ ಅಡಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಇಂತವುಗಳಿಗೆ ತಮ್ಮ ಅಕ್ಕಿಗಿರಣಿಗಳಲ್ಲಿ ಯಾವುದೇ ಕಾರಣಕ್ಕೂ ಅಸ್ಪದ ಕೊಡಬೇಡಿ ಮತ್ತು ಸಹಕರಿಸಬೇಡಿ ಎಂದು ಡಿಸಿ ನಕುಲ್ ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅಕ್ಕಿಗಿರಣಿ ಮಾಲೀಕರು ಇಂತಹ ಅಕ್ರಮಗಳಿಗೆ ನಮ್ಮ ಬೆಂಬಲವಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ; ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದರು. 

ಜ.1ರಿಂದ ಭತ್ತ ಖರೀದಿ ಆರಂಭ: 

2019-20ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಯೋಜನೆ ಅಡಿ ರೈತರಿಂದ ಭತ್ತವನ್ನು ಖರೀದಿಸಿ,ಸಂಗ್ರಹಿಸಿ ಹಲ್ಲಿಂಗ್ ಮಾಡಲು ನಿರ್ಧರಿಸಲಾಗಿದ್ದು, ಭತ್ತ ಖರೀದಿ ಪ್ರಕ್ರಿಯೆ 2020 ಜನೆವರಿ 1ರಿಂದ ಆರಂಭವಾಗಲಿದ್ದು ಮಾ.31ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ತಿಳಿಸಿದರು. 

ಸಿರಗುಪ್ಪ,ಬಳ್ಳಾರಿ,ಕಂಪ್ಲಿ, ಹೊಸಪೇಟೆ,ಹಗರಿಬೊಮ್ಮನಹಳ್ಳಿ,ಹಡಗಲಿ ಅಥವಾ ಹರಪನಳ್ಳಿಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಅಂತ ಅಂದುಕೊಳ್ಳಲಾಗಿದ್ದು, ಡಿ.20ರಂದು ನಡೆಯುವ ಟಾಸ್ಕ್ಫೋರ್ಸ  ಸಭೆಯಲ್ಲಿ ಖರೀದಿ ಕೇಂದ್ರಗಳು ಎಲ್ಲೆಲ್ಲಿ ಮತ್ತು ಎಷ್ಟು ಕೇಂದ್ರಗಳನ್ನು ಆರಂಭಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು. 

ರೂ.1815 ಸಾಮಾನ್ಯ, ರೂ.1835 ಗ್ರೇಡ್-ಎ ಭತ್ತಕ್ಕೆ ಸರಕಾರ ಈ ವರ್ಷದ ಬೆಂಬಲ ಬೆಲೆ ನಿಗದಿಪಡಿಸಿದೆ ಎಂದು ಹೇಳಿದ ಅವರು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರಿಂದ ವರ್ತಕರು ಹಾಗೂ ಅಕ್ಕಿಗಿರಣಿ ಮಾಲೀಕರು ಖರೀದಿ ಮಾಡಬೇಡಿ ಎಂದರು. 

ಕೃಷಿ ಇಲಾಖೆಯಿಂದ ಭತ್ತದ ಅಂಕಿಅಂಶಗಳನ್ನು ಪರಿಶೀಲಿಸಿದರೇ ಈ ವರ್ಷ ಉತ್ತಮ ಉತ್ಪಾದನೆ ಇದೆ. ಖರೀದಿ ಕೇಂದ್ರಗಳ ಮುಖಾಂತರ ರೈತರೊಬ್ಬರಿಂದ 40 ಕ್ವಿಂಟಲ್ ಗರಿಷ್ಠ ಖರೀದಿ ಮಾಡಲಾಗುವುದು ಎಂದರು. 

ಡಿ.25ರಿಂದ 30ರವರೆಗೆ ಅಕ್ಕಿಗಿರಣಿ ಮಾಲೀಕರು ಅಕ್ಕಿಗಿರಣಿ ಹಲ್ಲಿಂಗ್ ಸಾಮಥ್ರ್ಯ ಮತ್ತು ಭತ್ತ ಸಂಗ್ರಹಣಾ ಸಾಮಥ್ರ್ಯ ಹಾಗೂ ಇನ್ನೀತರ ವಿವರ ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು. ಡಿ.26ರಿಂದ ಜ.10ರವರೆಗೆ ರೈತರು ನೋಂದಣಿ ಮಾಡಬೇಕು. ಜ.1ರಿಂದ ಮಾ.31ರವರೆಗೆ ಭತ್ತ ಖರೀದಿ ಮಾಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ರಾಮೇಶ್ವರಪ್ಪ, ಸಹಾಯಕ ನಿರ್ದೇಶಕರಾದ ಸುನೀತಾ ಮತ್ತು ಹಲೀಮಾ ಇದ್ದರು.