ಬಳ್ಳಾರಿ: ಸಮಸ್ಯೆ ಬಗೆಹರಿಸಿ ಪುಣ್ಯ ಕಟ್ಕೊಳ್ಳಿ...!

ಲೋಕದರ್ಶನ ವರದಿ

ಬಳ್ಳಾರಿ 29: "ನನ್ನ ಗಂಡ ಅಂಗವಿಕಲನಾಗಿದ್ದು, ನನ್ನ ಎರಡು ಮಕ್ಕಳು ಅಂಗವಿಕಲತೆ ಇದ್ದು, ನನ್ನ ಗಂಡನಿಗೆ ಮೋಟರ್ ವಾಹನ ಮತ್ತು ಮಕ್ಕಳಿಗೆ ತಳ್ಳುವ ಬೈಸಿಕಲ್ ನೀಡಿ ಪುಣ್ಯ ಕಟ್ಕೊಳ್ಳಿ..."

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಹಿಳೆಯೊಬ್ಬಳು ಅಲವತ್ತುಕೊಂಡಳು. 

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಕೂಡಲೇ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಹೆಚ್.ಮಹೇಶ್ವರ ಅವರು ಉದ್ಯೋಗವಿಲ್ಲದ ಕಾರಣ ಜೀವನ ನಡೆಸುವುದು ಬಹಳಷ್ಟು ಕಷ್ಟಕರವಾಗಿದ್ದು, ಜಿಲ್ಲೆಯ ಯಾವುದೇ ಗ್ರಾಪಂ ಕೆಲಸ ಮಾಡಲು ಸಿದ್ದನಿದ್ದೇನೆ. ದಯಮಾಡಿ ಯಾವುದಾದರೂ ಗ್ರಾಪಂನಲ್ಲಿ ಖಾಲಿ ಇರುವ ಕಡೆಯಲ್ಲಿ ಉದ್ಯೋಗ ನೀಡುವಂತೆ ಕೋರಿದರು. 

ಹೊಸಪೇಟೆ ನಿವಾಸ ಗುರುಗಂಗಾಧರ ಗುಪ್ತ ಅವರ ಕಿಡ್ನಿ ವೈಫಲ್ಯಕ್ಕೆ ಆರ್ಥಿಕ ಸಹಾಯಕ, ಕೌಲ್ಬಜಾರ್ ಪ್ರದೇಶದಲ್ಲಿರುವ ಷರೀಫ್ ಬೀದಿಯಲ್ಲಿ ವಿದ್ಯುತ್ ದೀಪ ಇಲ್ಲದ ಕಾರಣ ಓಡಾಟ ಕಷ್ಠಕರವಾಗಿದೆ ಪ್ರದೇಶದಲ್ಲಿ ಬೀದಿ ದೀಪ ಅಳವಡಿಸುವಂತೆ ಸಾರ್ವಜನಿಕರೊಬ್ಬರು ಕೋರಿದರು.

ರಸ್ತೆ, ಒಳಚರಂಡಿ, ಹಕ್ಕು ಪತ್ರ ಬದಲಾವಣೆ ಕೋರಿ, ಕುಂದು ಕೊರತೆ ಪತ್ರಗಳನ್ನು ಈ ಸಂದರ್ಭದಲ್ಲಿ ಸ್ವೀಕರಿಸಲಾಯಿತು. 

ಅಜರ್ಿಯನ್ನು ಆಯಾ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಕಾನೂನು ರೀತ್ಯ ಅಜರ್ಿದಾರರಿಗೆ ಸೌಲಭ್ಯ ಒದಗಿಸುವಂತೆ ಸೂಚಿಸಲಾಗುವುದು ಎಂದು ಡಿಸಿ ನಕುಲ್ ತಿಳಿಸಿದರು.

ಸಾರ್ವಜನಿಕರು ಯಾವುದೇ ಅಧಿಕಾರಿಗಳಿಗೆ ಭಯಪಡೆದೇ ಖುದ್ದಾಗಿ ಅಜರ್ಿಯನ್ನು ಸಲ್ಲಿಸಬಹುದು ಅಥವಾ ಇ-ಸ್ಪಂದನದಲ್ಲಿ ಅಜರ್ಿಯನ್ನು ಸಲ್ಲಿಸಬಹದು ಎಂದರು. ಇದುವರೆಗೂ 480 ಕ್ಕೂ ಅಜರ್ಿ ಸ್ವೀಕತಗೊಂಡಿದ್ದು, 310 ಪರಿಹರಿಸಲಾಗಿದೆ. ಉಳಿದ ಅಜರ್ಿಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. 

ಹಿರಿಯ ನಾಗರೀಕರಿಂದ, ವಿಕಲಚೇತನರಿಂದ ಒಟ್ಟಾರೆ 18 ಕ್ಕೂ ಹೆಚ್ಚು ಅಜರ್ಿಗಳನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿಪಂ ಸಿಇಒ ನಿತೀಶ್, ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.