ಲೋಕದರ್ಶನ ವರದಿ
ಬಳ್ಳಾರಿ 12: ಗಣಿ ಮತ್ತು ಬಿಸಿಲು ನಾಡೆಂದೇ ಕರೆಯಲಾಗುವ ಬಳ್ಳಾರಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ ಬಲು ಅಪರೂಪ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿನ 55 ವರ್ಷದ ರಾಜಶೇಖರ್ ದ್ರೋಣವಲ್ಲಿ ಎರಡು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ.
ಇವರದು ಮೂಲ ಕೃಷಿಕ ಕುಟುಂಬ. ಹೈದರಾಬಾದಿನಲ್ಲಿ 3 ವರ್ಷ ಸಾಫ್ಟ್ವೇರ್ ಇಂಜಿನಿಯರ್ ಸೇವೆಗೈದು ಇಂಜಿನಿಯರ್ ವೃತ್ತಿಗೆ ವಿದಾಯ ಹೇಳಿ ಕೃಷಿ ಮತ್ತು ಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಇವರ ಕೃಷಿ ಸಾಧನೆಯ ಯಶೋಗಾಥೆ ಇಲ್ಲಿದೆ. ಒಟ್ಟು 13 ಎಕರೆ ಭೂಮಿಯಲ್ಲಿ ಪಾರಂಪರಿಕ ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆಯುತ್ತಿದ್ದರು. ಮುಂಡರಗಿಯ ಸಂಬಂಧಿಕ ವೇಣು ಹೊಲದಲ್ಲಿರುವ ಡ್ರ್ಯಾಗನ್ ಹಣ್ಣಿನ ಬೆಳೆಯನ್ನು ಕಂಡು ತಾವು ಸಹ ಈ ಹಣ್ಣಿನ ಬೇಸಾಯ ಕೈಗೊಳ್ಳಲು ಮುಂದಾದರು. ಇದಕ್ಕಾಗಿ 2 ಎಕರೆಗೆ ಸುಮಾರು 25-35 ಟನ್ ಕೋಳಿಗಳ ತ್ಯಾಜ್ಯವನ್ನು ಹಾಕಿ ಚೆನ್ನಾಗಿ ಉಳುಮೆ ಮಾಡಿಸಿದರು.
ನಂತರ 2018ರ ಫೆಬ್ರವರಿಯಲ್ಲಿ ಮುಂಡರಗಿಯ ನೆಂಟರ ತೋಟದಿಂದ ಪ್ರಕಾಶಮಾನವಾದ ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು(ಕಟಿಞ ತಿಣ ಛಡಿರಣ ಡಿಜಜ-ಠಿಟಿಞ ಜಿಟಜ ಅಣಣಣಟಿರ) ತಂದು ಕಂಬದಿಂದ ಕಂಬಕ್ಕೆ 6 ಅಡಿ ಮತ್ತು ಸಾಲಿನಿಂದ ಸಾಲಿಗೆ 14 ಅಡಿಯಂತೆ ಒಟ್ಟು 900 ಕಂಬಕ್ಕೆ 3600 ಬಳ್ಳಿಗಳನ್ನು ಹರಡಿಸಿದ್ದಾರೆ. ಪ್ರತಿ 2-3 ತಿಂಗಳಿಗೊಮ್ಮೆ ಸುಮಾರು 10-12ಕೆ.ಜಿ.ಯಷ್ಟು ಕೋಳಿಗಳ ತ್ಯಾಜ್ಯವನ್ನು ಪ್ರತಿಯೊಂದು ಬಳ್ಳಿಗೆ ಹಾಕುತ್ತಿದ್ದಾರೆ. ಜಮೀನಿನಲ್ಲಿರುವ ಕೊಳವೆಬಾವಿ ಮತ್ತು ಹತ್ತಿರದ ಹೊಂಡ ನೀರಿನ ಮೂಲವಾಗಿದೆ. ತೋಟಗಾರಿಕೆ ಇಲಾಖೆಯಿಂದ ಈ ಹಣ್ಣಿನ ಬೆಳೆಗೆ ಹನಿ ನೀರಾವರಿ ಅಳವಡಿಸಿಕೊಂಡು ತೋಟಗಾರಿಕೆ ಅಧಿಕಾರಿಗಳ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಡ್ರ್ಯಾಗನ್ ಬೇಸಾಯ ಕ್ರಮಗಳನ್ನು ಅನುಸರಿಸಿದ್ದಾರೆ. ಈಗ ಎಂಟು ತಿಂಗಳಿಂದ ಇಳುವರಿ ಪ್ರಾರಂಭವಾಗಿದ್ದು, ಸುಮಾರು 800 ಕೆ.ಜಿ.ಯಷ್ಟು ಡ್ರ್ಯಾಗನ್ ಹಣ್ಣು ಪಡೆದಿದ್ದಾರೆ.
ಒಂದು ಹಣ್ಣು 250-500 ಗ್ರಾಂ ತೂಕವಿದ್ದು, ಒಂದು ಕೆ.ಜಿ.ಗೆ(2-3 ಹಣ್ಣುಗಳಿಗೆ) 100-150ರೂ. ಸಿಗುತ್ತದೆ. ಸದ್ಯಕ್ಕೆ ಕೋಳಿ ಫಾಮರ್ಿನ ತತ್ತಿ ಮಾರಾಟ ಮಳಿಗೆಗಳ ಮೂಲಕ ಡ್ರ್ಯಾಗನ್ ಹಣ್ಣು ಮಾರುತ್ತಿದ್ದು, ಮಾರಾಟಗಾರರಿಗೆ ಮಾರಾಟ ತರಬೇತಿ ಸಹ ನೀಡಿದ್ದಾರೆ. ರತ್ನರಾವ ಮತ್ತು ರಾಣಿ ಪ್ರಮಿಳಾರ ಮಗನಾಗಿರುವ ರಾಜಶೇಖರ್ ಹೊಸಪೇಟೆಯ ರಾಯರಕೆರೆ ಬಳಿಯ ಜಂಬುನಾಥನಹಳ್ಳಿಯಲ್ಲಿ ಸುಮಾರು 25 ವರ್ಷಗಳಿಂದ ಕೋಳಿ ಸಾಕಾಣಿಕೆ (ಕಠಣಟಣಡಿಥಿ ಜಿಚಿಡಿಟಟಿರ) ಮಾಡುತ್ತಿರುವರು. ಸುಮಾರು 60000 ಕೋಳಿಗಳಿದ್ದು, ಇದರಿಂದ ವರ್ಷಕ್ಕೆ 5-6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಓರ್ವ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. "ಈ ಭಾಗದಲ್ಲಿ ಡ್ರ್ಯಾಗನ್ ಹಣ್ಣು ಹೊಸ ಬೆಳೆಯಾಗಿದ್ದು, ಯಾರಿಗೂ ಪರಿಚಯವಿಲ್ಲ. ಇದರಿಂದ ಸುತ್ತಮುತ್ತಲಿನ ರೈತರಿಗೆ ಬೆಳೆಯ ಬಗ್ಗೆ ಮತ್ತು ಸಾರ್ವಜನಿಕರಿಗೆ ಹಣ್ಣಿನಿಂದಾಗುವ ಆರೋಗ್ಯಕರ ಲಾಭದ ಬಗ್ಗೆ ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಿದ್ದೇನೆ. ಪತ್ನಿ ವಾಣಿಯೊಂದಿಗೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಈ ಹಣ್ಣನ್ನು ಉಚಿತವಾಗಿ ನೀಡಿ ಪರಿಚಯಿಸಲಾಗುತ್ತಿದೆ. ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ ನೀಡುವ ಇದು ಹೆಚ್ಚು ಲಾಭದಾಯಕ ಬೆಳೆಯಾಗಿದೆ.
ಸದರಿ ತೋಟಕ್ಕೆ ಕನರ್ಾಟಕ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದಶರ್ಿ ಮತ್ತು ಅಭಿವೃದ್ಧಿ ಆಯುಕ್ತೆ ವಂದಿತಾ ಶಮರ್ಾ ಹಾಗೂ ತಮಿಳುನಾಡಿನ ತೋಟಗಾರಿಕೆ ಮತ್ತು ಪ್ಲ್ಯಾಂಟೇಶನ್ ಕ್ರಾಪ್ಸ್ ನಿದರ್ೇಶಕರು ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಾಯೋಗಿಕವಾಗಿ ಪ್ರಾರಂಭಿಸಿದ ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ತೋಟಗಾರಿಕೆ ಇಲಾಖೆಯ ಸಹಾಯದಿಂದ ಇನ್ನೂ 8 ಎಕರೆ ಕ್ಷೇತ್ರದಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ" ಎಂಬುದು ಅವರ ಅನಿಸಿಕೆ. ಇವರ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ 9448131806.