ಲೋಕದರ್ಶನ ವರದಿ
ಬಳ್ಳಾರಿ 16: ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗಲಿ ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದ್ದು, ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಬಿಜೆಪಿ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ಬೃಹತ್ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ರಾಮುಲು ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಡುವ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಲ ಚಕ್ರ ಹೀಗೆ ಇರೋಲ್ಲ, ಬದಲಾಗುತ್ತಿರುತ್ತದೆ. ರಾಜಕೀಯ ಅಂದರೆ ಹೀಗೆನೇ, 2008ರಲ್ಲಿ ಪ್ರಬಲರಾಗಿದ್ವಿ, ಅದರಂತೆ ನಾವು ಈಗಲೂ ಸ್ಟ್ರಾಂಗ್ ಇದ್ದೇವೆ, ಮುಂದೆಯೂ ಗಟ್ಟಿಯಾಗಿರಲಿದ್ದೇವೆ. ನಮ್ಮನ್ನು ಭಗವಂತ ಮಾತ್ರ ವೀಕ್ ಮಾಡಬೇಕೆ ಹೊರತು ಬೇರೆಯವರಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅಭಿವೃದ್ಧಿ ಪರ್ವ ಆರಂಭವಾಗಿದೆ. ಒಂದು ವರ್ಷದಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಕೇವಲ 100 ದಿನಗಳಲ್ಲಿ ಮುಖ್ಯಮಂತ್ರಿ ಮಾಡಿದ್ದಾರೆ. ಬಳ್ಳಾರಿ ನಗರಕ್ಕೆ ನೂರಾರು ಕೋಟಿ ರೂ. ಅನುದಾನ ಒದಗಿಸಿಕೊಟ್ಟಿದ್ದಾರೆ. ವಿಜಯನಗರ ಜಿಲ್ಲೆ ರಚನೆಗೆ ವಿರೋಧವಿದೆ. ಬಳ್ಳಾರಿ ಜಿಲ್ಲೆ ಅಖಂಡವಾಗಿರಬೇಕೆಂಬುದು ನಮ್ಮ ನಿಧರ್ಾರ. ಜಿಲ್ಲೆ ಒಡೆಯೋದು ಬೇಡವೆಂದು ಶಾಸಕ ಆನಂದಸಿಂಗ್ಗೆ ಮನವಿ ಮಾಡುವೆ.
-ಜಿ.ಸೋಮಶೇಖರರೆಡ್ಡಿ, ನಗರ ಶಾಸಕ ಬಳ್ಳಾರಿ