ಬಳ್ಳಾರಿ 13: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಅತ್ಯಂತ ಹೆಮ್ಮೆ ಹಾಗೂ ಸಂಭ್ರಮದಿಂದ ಮೇ,14-2019 ರಂದು ತನ್ನ ಏಳನೆಯ ಘಟಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರೊ. ಅನಿಲ್ ಡಿ ಸಹಸ್ರಬುಧೆಯವರು ಘಟಿಕೋತ್ಸವ ಭಾಷಣ ನೆರವೇರಿಸಿ ಕೊಡಲಿದ್ದಾರೆ. ಕನರ್ಾಟಕದ ಘನತೆವೆತ್ತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ವಜುಭಾಯಿ ವಾಲಾರವರು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕದ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡರು, ಸಮಕುಲಾಧಿಪತಿಗಳು ಇವರು ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಘಟಿಕೋತ್ಸವವು ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮೇ.14. ಮಂಗಳವಾರದಂದು ಬೆಳಿಗ್ಗೆ 11.00 ಘಂಟೆಗೆ ಪ್ರಾರಂಭವಾಗಲಿದೆ. 2010 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ವಿಭಜಿತಗೊಂಡು ಪ್ರಾರಂಭವಾದ ಈ ವಿಶ್ವವಿದ್ಯಾಲಯವು ಈ ಒಂಭತ್ತು ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಈ ವಿಶ್ವವಿದ್ಯಾಲಯವು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿದ್ದು 120 ಮಹಾವಿದ್ಯಾಲಯಗಳು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಯೋಜನೆ ಪಡೆದಿವೆ. ನಮ್ಮ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಾಧನೆಯ ಬೆಂಬಲದಿಂದ ಒಂಭತ್ತು ವರ್ಷಗಳ ಅಲ್ಪಾವಧಿಯಲ್ಲಿ ಈ ವಿಶ್ವವಿದ್ಯಾಲಯವು ಹಲವಾರು ಶೈಕ್ಷಣಿಕ ಮೈಲಿಗಲ್ಲುಗಳನ್ನು ದಾಟಿದೆ. ಏಪ್ರಿಲ್ 2019 ರಂದು ಯುಜಿಸಿಯ ತಜ್ಞರ ಸಮಿತಿಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದು ಸಧ್ಯದಲ್ಲಿಯೇ ವಿಶ್ವವಿದ್ಯಾಲಯಕ್ಕೆ ಯುಜಿಸಿ ಯಿಂದ 12ಃ ಮಾನ್ಯತೆ ದೊರೆಯಲಿದೆ. ಮತ್ತೊಂದು ಸಂತೋಷದ ವಿಷಯವೆಂದರೆ, ಸಧ್ಯದಲ್ಲಿಯೇ ನಮಗೆ ಓಂಂಅ ದಿಂದಲೂ ಮಾನ್ಯತೆ ದೊರೆಯಲಿದೆ. ಈ ವರ್ಷ ಅಮೃತಸರ್ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 10 ಕಂಚಿನ ಪದಕ ಹಾಗೂ 06 ಬೆಳ್ಳಿಯ ಪದಕ ಪಡೆದಿದ್ದಾರೆ. ಸರಾಸರಿ ದಾಖಲಾತಿ ಅನುಪಾತ: ವಿಶ್ವವಿದ್ಯಾಲಯದಲ್ಲಿ ಸರಾಸರಿ ದಾಖಲಾತಿ ಅನುಪಾತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2017-18 ಶೈಕ್ಷಣಿಕ ವರ್ಷದಲ್ಲಿ ಸ್ನಾತರ ಕೋರ್ಸ್ಗಳಲ್ಲಿ ಒಟ್ಟು ಪ್ರವೇಶಾತಿ 12357 ಇದ್ದು, ಇದು ಈ ವರ್ಷ ಶೇ. 36% ರಷ್ಟು ಏರಿಕೆ ಕಂಡಿದೆ. ಹಾಗೆಯೇ ಸ್ನಾತಕೋತ್ತರ ಕೋರ್ಸಗಳಲ್ಲಿ ಈ ವರ್ಷ ಒಟ್ಟು ಪ್ರವೇಶಾತಿ 2092 ಇದ್ದು ಇದು ಶೇ. 145% ರಷ್ಟು ಏರಿಕೆ ಕಂಡಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಕಾಲೇಜುಗಳ ಸ್ಥಾಪನೆ, ಹೊಸ ಕೋರ್ಸ್ಗಳ ಜಾರಿ ಮೂಲಕ ಸರಾಸರಿ ದಾಖಲಾತಿ ಅನುಪಾತವನ್ನು ಹೆಚ್ಚಿಸಲು ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದೆ. ಪರೀಕ್ಷಾ ಫಲಿತಾಂಶ:
ಈ ವರ್ಷ ನಮ್ಮ ವಿಶ್ವವಿದ್ಯಾಲಯದಿಂದ 7992 ವಿದ್ಯಾಥರ್ಿಗಳು ಸ್ನಾತಕ ಪದವಿ ಪಡೆಯಲಿದ್ದಾರೆ. ಒಟ್ಟು 10672 ವಿದ್ಯಾಥರ್ಿಗಳು ಸ್ನಾತಕ ಪದವಿ ಪರೀಕ್ಷೆ ಬರೆದಿದ್ದು, ಉತ್ತೀರ್ಣರಾದವರ ಪ್ರಮಾಣ ಪ್ರತಿಶತ 75 ಆಗಿದೆ. ಹಾಗೆಯೇ 1789 ವಿದ್ಯಾಥರ್ಿಗಳು ಸ್ನಾತಕೋತ್ತರ ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 1660 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಕೋಸರ್್ಗಳಲ್ಲಿ ಪ್ರತಿಶತ 93% ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕ ಕೋಸರ್್ಗಳಲ್ಲಿ 80 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರಕೋರ್ಸಗಳಲ್ಲಿ 121 ವಿದ್ಯಾಥರ್ಿಗಳು ರ್ಯಾಂಕ್ ಪಡೆದಿದ್ದಾರೆ. ಅಲ್ಲದೆ ಸ್ನಾತಕ ಕೋಸರ್್ಗಳಲ್ಲಿ 18 ವಿದ್ಯಾಥರ್ಿಗಳು ಹಾಗೂ ಸ್ನಾತಕೋತ್ತರ ಕೋರ್ಸಗಳಲ್ಲಿ 54 ವಿದ್ಯಾರ್ಥಿಗಳು ತಮ್ಮ ಉತ್ತಮ ಸಾಧನೆಯಿಂದ ಚಿನ್ನದ ಪದಕ ಪಡೆದಿದ್ದಾರೆ.
ಈ ವರ್ಷ ರಾಜಯೋಗಿನಿ ದಾದಿ ಹೃದಯ ಮೋಹಿನಿ ಯವರಿಗೆ ನಮ್ಮ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದೇವೆ. ಉದ್ಯೋಗಾವಕಾಶ:-2017-18 ನೇ ಸಾಲಿನಲ್ಲಿ 10 ಕಂಪನಿಗಳು ನಮ್ಮ ವಿಶ್ವವಿದ್ಯಾಲಯದ ಸುಮಾರು 200 ವಿದ್ಯಾಥರ್ಿಗಳಿಗೆ ಉದ್ಯೋಗಾವಕಾಶ ದೊರಕಿಸಿವೆ.
ಮುಂತಾದವುಗಳು ಮೂಲಸೌಕರ್ಯ:
ಈಗಿರುವ ಮೂಲಸೌಕರ್ಯಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಹೊಸ ಸೇರ್ಪಡೆಗಳಿವೆ. ಅವುಗಳೆಂದರೆ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾಥರ್ಿನಿಲಯ ಹಾಗೂ ವಿದ್ಯಾಥರ್ಿನಿಯರ ನಿಲಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾಥರ್ಿ ಹಾಗೂವಿದ್ಯಾರ್ಥಿಗಳ ಬಹುಸೌಲಭ್ಯಗಳ ಕೇಂದ್ರ, ಬಯಲು ರಂಗ ಮಂದಿರ (2000 ಆಸನ ವ್ಯವಸ್ಥೆ ಸಾಮಥ್ರ್ಯ) ಇದರಲ್ಲಿದೆ. ಮುಂದಿನ ವರ್ಷದಲ್ಲಿ ಒಳಾಂಗಣ ಕ್ರೀಡಾಂಗಣ ಹಾಗೂ ಘಟಿಕೋತ್ಸವ ಭವನ, ಉದ್ಯೋಗಾವಕಾಶ ಕೇಂದ್ರ ಹಾಗೂ ಸಭಾಂಗಣಗಳನ್ನು ನಿಮರ್ಿಸುವ ಪ್ರಸ್ತಾಪವಿದೆ ಎಂದು ವಿವರಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ಕುಲಪತಿಗಳಾದ ಎಂ.ಎಸ್.ಸುಬಾಸ್, ಕುಲಸಚಿವರು ಮೌಲ್ಯಮಾಪನ ಪ್ರೋ|| ಕೆ.ರಮೇಶ್, ಕುಲಸಚಿವರು ಪ್ರೋ|| ಬಿ.ಕೆ.ತುಳಸಿಮಾಲ ಉಪಸ್ಥಿತರಿದ್ದರು.